ADVERTISEMENT

ಸೈಬರ್ ಅಪರಾಧ ಮಾಹಿತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 6:35 IST
Last Updated 17 ಅಕ್ಟೋಬರ್ 2024, 6:35 IST
ಸೈಬರ್ ಅಪರಾಧ ಮತ್ತು ಪೋಕ್ಸೊ ಕಾಯ್ದೆಯ ಕುರಿತು ಮಾಹಿತಿ ಕಾರ್ಯಕ್ರಮ ಜರಗಿತು
ಸೈಬರ್ ಅಪರಾಧ ಮತ್ತು ಪೋಕ್ಸೊ ಕಾಯ್ದೆಯ ಕುರಿತು ಮಾಹಿತಿ ಕಾರ್ಯಕ್ರಮ ಜರಗಿತು   

ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ದಿಶಾ ಮಹಿಳಾ ಸಂಘದ ವತಿಯಿಂದ ಈಚೆಗೆ ಸೈಬರ್ ಅಪರಾಧ ಮತ್ತು ಪೋಕ್ಸೊ ಕಾಯ್ದೆಯ ಕುರಿತು ಮಾಹಿತಿ ಕಾರ್ಯಕ್ರಮ ಜರುಗಿತು.

ಕರಾವಳಿ ಕಾವಲು ಪಡೆಯ ಸಬ್‌ ಇನ್‌ಸ್ಪೆಕ್ಟರ್‌ ಮುಕ್ತಾಭಾಯಿ ಮಾತನಾಡಿ, ಮನೆಯ ಬಾಂಧವ್ಯ ತುಂಬಾ ಉತ್ತಮವಾಗಿರಬೇಕು. ಪೋಷಕರೊಂದಿಗೆ ಮಾತನಾಡಿ ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ ಎಂದರು.

ಕಾಲೇಜಿನ ಉಪ ಪ್ರಾಚಾರ್ಯ ರಾಧಾಕೃಷ್ಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಕಾವಲು ಪಡೆ ಸಿಬ್ಬಂದಿ ದಿನೇಶ್ ಶೆಟ್ಟಿ ಇದ್ದರು.

ADVERTISEMENT

ದಿಶಾ ಸಂಘದ ಸಹ ಸಂಚಾಲಕಿ ಇಂದಿರಾ ಸ್ವಾಗತಿಸಿದರು. ಎನ್ಎಸ್ಎಸ್ ಯೋಜನಾಧಿಕಾರಿ ರಾಜೇಶ್ ಕುಮಾರ್ ವಂದಿಸಿದರು. ದಿಶಾ ಸಂಘದ ಸಂಚಾಲಕಿ ಜಯಲಕ್ಷ್ಮಿ ಜಿ. ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.