ADVERTISEMENT

‘ತಂತ್ರಜ್ಞಾನ: ಅರಗಿಸಿಕೊಳ್ಳುವ ಮನಃಸ್ಥಿತಿ ಅಗತ್ಯ’

‘ಸೈಬರ್ ಫಿಸಿಕಲ್ ಸಿಸ್ಟಮ್ಸ್’ ಕುರಿತ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 7:02 IST
Last Updated 8 ಅಕ್ಟೋಬರ್ 2022, 7:02 IST
ಕಾರ್ಕಳ ತಾಲ್ಲೂಕಿನ ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನಡೆದ ಕಾರ್ಯಾಗಾರಕ್ಕೆ ಬೆಂಗಳೂರಿನ ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್‌ನ ನಿರ್ದೇಶಕ ಗುರುಪ್ರಸಾದ್ ಎಸ್ ಚಾಲನೆ ನೀಡಿದರು.
ಕಾರ್ಕಳ ತಾಲ್ಲೂಕಿನ ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನಡೆದ ಕಾರ್ಯಾಗಾರಕ್ಕೆ ಬೆಂಗಳೂರಿನ ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್‌ನ ನಿರ್ದೇಶಕ ಗುರುಪ್ರಸಾದ್ ಎಸ್ ಚಾಲನೆ ನೀಡಿದರು.   

ಕಾರ್ಕಳ: ತಂತ್ರಜ್ಞಾನದ ಬೆಳವಣಿಗೆಯನ್ನು ಅರಗಿಸಿಕೊಳ್ಳುವ ಮನಃಸ್ಥಿತಿಯನ್ನು ಹೊಂದಿರಬೇಕಾದುದು ಅಗತ್ಯ ಎಂದು ಬೆಂಗಳೂರಿನ ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್‌ನ ನಿರ್ದೇಶಕ ಗುರುಪ್ರಸಾದ್ ಎಸ್ ಹೇಳಿದರು.

ತಾಲ್ಲೂಕಿನ ನಿಟ್ಟೆ ತಾಂತ್ರಿಕ ಕಾಲೇಜಿನ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸೈಬರ್ ಫಿಸಿಕಲ್ ಸಿಸ್ಟಮ್ಸ್’ ಕುರಿತ ಶಿಕ್ಷಕರ ಜ್ಞಾನವೃದ್ಧಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಉದ್ಯಮದ ಅಗತ್ಯಕ್ಕೆ ತಕ್ಕಂತೆ ನಾವು ಬದಲಾಗಬೇಕು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೃಜನಾತ್ಮಕವಾಗಿ ಯೋಚಿಸಿ ಅಂತರ್ ವಿಷಯಗಳ ಸಂಶೋಧನೆಗಳನ್ನು ಹೆಚ್ಚು ಮಾಡಬೇಕಾಗಿದೆ’ ಎಂದರು.

ಡಾ.ಪೂರ್ಣಲತಾ ಜಿ. ಶುಭ ಹಾರೈಸಿದರು. ಪ್ರಾಂಶುಪಾಲ ಡಾ. ನಿರಂಜನ ಎನ್ ಚಿಪ್ಳೂಣ್ಕರ್ ಅಧ್ಯಕ್ಷತೆ ವಹಿಸಿದ್ದರು. ‘ಈಗಿನ ತಂತ್ರಜ್ಞಾನದ ಯುಗಕ್ಕೆ ಇಂತಹ ಕಾರ್ಯಾಗಾರ ವಿಷಯ ಬಹಳ ಪ್ರಸ್ತುತವೆನಿಸುತ್ತದೆ. ನಮ್ಮ ಸಂಸ್ಥೆಯು ಪಠ್ಯ ಮತ್ತು ಪಠ್ಯೇತರವಾಗಿ ಮಾತ್ರವಲ್ಲದೆ ಪ್ರಾಯೋಗಿಕವಾಗಿಯೂ ಬೆಳೆಯುತ್ತಿದೆ. ಇಂತಹ ಪ್ರಾಯೋಗಿಕ ಜ್ಞಾನವೃದ್ಧಿ ಕಾರ್ಯಕ್ರಮಗಳ ಪೂರ್ಣ ಸದುಪಯೋಗವನ್ನು ಪ್ರಾಧ್ಯಾಪಕರು ಪಡೆದುಕೊಳ್ಳಬೇಕು’ ಎಂದರು.

ADVERTISEMENT

ಎನ್.ಐ.ಟಿ.ಕೆಯ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ್ ಎಂ, ಸಂಯೋಜಕ ಡಾ.ಬೊಮ್ಮೇಗೌಡ ಇದ್ದರು. ಸಹಪ್ರಾಧ್ಯಾಪಕ ಡಾ.ದುರ್ಗಾಪ್ರಸಾದ್ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಎಸ್. ಸಾಯಿರಾಮ್ ಪ್ರಾಮುಖ್ಯತೆಯನ್ನು ವಿವರಿಸಿದರು. ಸಂಯೋಜಕ ಡಾ. ಶಿವಪ್ರಕಾಶ ಕೆ.ಎಸ್ ವಂದಿಸಿದರು. ಸಹಪ್ರಾಧ್ಯಾಪಕಿ ಡಾ. ವಿದ್ಯಾ ಕುಡ್ವ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.