ಹೆಬ್ರಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ‘169ಎ’ಯ ಸೀತಾನದಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಹೆದ್ದಾರಿಗೆ ಬಾಗಿದ್ದ ಅಪಾಯಕಾರಿ ಮರಗಳನ್ನು ಸಾರ್ವಜನಿಕರ ಮನವಿ ಹಿನ್ನೆಲೆ ಮಂಗಳವಾರ ತೆರವು ಮಾಡಲಾಯಿತು.
ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಹೆದ್ದಾರಿಯನ್ನು ಬಂದ್ ಮಾಡಿ ಮರ ತೆರವು ಕಾರ್ಯ ನಡೆಯಿತು. ಹೆಬ್ರಿಗೆ ಬರುವ ಬಸ್‌ಗಳು ಸೋಮೇಶ್ವರ ಅಲ್ಬಾಡಿ ಮೂಲಕ ಸಂಚರಿಸಿದವು.
ಜನಾಗ್ರಹಕ್ಕೆ ಅರಣ್ಯ ಇಲಾಖೆಯ ಸ್ಪಂದನೆ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಾಗಿಕೊಂಡಿರುವ ಅಪಾಯಕಾರಿ ಮರಗಳನ್ನು ತೆರವು ಮಾಡಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಸಮಸ್ಯೆಯ ಗಂಭೀರತೆ ಅರಿತು ಅರಣ್ಯ ಇಲಾಖೆಯವರು ಮುತುವರ್ಜಿ ವಹಿಸಿ, ಮರಗಳನ್ನು ತೆರವು ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡಲು ಜನ ಮನವಿ ಮಾಡಿದ್ದರು. ದಿನನಿತ್ಯ ಸಾವಿರಾರು ವಾಹನಗಳು ಓಡಾಡುವುದರಿಂದ, ಸಮಸ್ಯೆಯ ಗಂಭೀರತೆ ಅರಿತು, ಮರಗಳ ತೆರವಿಗೆ ಆದೇಶವಾದ ಹಿನ್ನೆಲೆ ಕೆಲವೊಂದು ಅಪಾಯಕಾರಿ ಮರಗಳನ್ನು ತೆರವು ಮಾಡಲಾಗಿದೆ ಎಂದು ಹೆಬ್ರಿ ವಲಯ ಅರಣ್ಯಾಧಿಕಾರಿ ಮಂಜುಳ ಸಿದ್ದಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.