ADVERTISEMENT

ಕೋಟ ಮೆಸ್ಕಾಂ: ಸ್ವಂತ ಕಟ್ಟಡ ಪ್ರಕ್ರಿಯೆ ವಿಳಂಬ, ಸಿಬ್ಬಂದಿಗಳ ಕೊರತೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಮೇ 2025, 11:03 IST
Last Updated 17 ಮೇ 2025, 11:03 IST
ಕೋಟ ಉಪವಿಭಾಗ ವ್ಯಾಪ್ತಿಯ ಮೆಸ್ಕಾಂ ಜನಸಂಪರ್ಕ ಸಭೆ ಕೋಟದ ಉಪವಿಭಾಗದ ಸಭಾಂಗಣದಲ್ಲಿ ನಡೆಯಿತು.
ಕೋಟ ಉಪವಿಭಾಗ ವ್ಯಾಪ್ತಿಯ ಮೆಸ್ಕಾಂ ಜನಸಂಪರ್ಕ ಸಭೆ ಕೋಟದ ಉಪವಿಭಾಗದ ಸಭಾಂಗಣದಲ್ಲಿ ನಡೆಯಿತು.   

ಬ್ರಹ್ಮಾವರ: ಕೋಟ ಉಪವಿಭಾಗ ವ್ಯಾಪ್ತಿಯ ಮೆಸ್ಕಾಂ ಜನಸಂಪರ್ಕ ಸಭೆ ಉಪವಿಭಾಗದ ಸಭಾಂಗಣದಲ್ಲಿ ನಡೆಯಿತು.

ಪರಿಸರವಾದಿ ಕೋ.ಗಿನಾ ಕೋಟ ಉಪವಿಭಾಗಕ್ಕೆ ಸ್ವಂತ ಕಚೇರಿಗೆ ಮಂಜೂರಾತಿ ಆದೇಶಗೊಂಡ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೂ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಕೋಟದಲ್ಲಿ ಮೆಸ್ಕಾಂ ಸರ್ವಿಸ್ ಸ್ಟೇಷನ್ ಇದ್ದರೂ ಸಿಬ್ಬಂದಿಯನ್ನು ನೇಮಕಗೊಳಿಸಿಲ್ಲ. ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಉಡುಪಿ ಸಹಾಯ ಅಧೀಕ್ಷಕ ದಿನೇಶ ಉಪಾಧ್ಯಾಯ ಅವರು, ಉಪವಿಭಾಗದ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವಾಗಿದೆ. ಪುನಃ  ಪ್ರಕ್ರಿಯೆ ನಡೆಸಬೇಕಿದೆ ಎಂದು ಉತ್ತರಿಸಿದರು.

ADVERTISEMENT

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಸ್ಥಳದ ವಿವಿಧ ಭಾಗಗಳಲ್ಲಿರುವ ಹಳೆಯ ಕಂಬಗಳನ್ನು ತೆರವುಗೊಳಿಸಲು ಸಾಮಾಜಿಕ ಕಾರ್ಯಕರ್ತ ನಾಗರಾಜ ಗಾಣಿಗ ಮನವಿ ಮಾಡಿದರು.

ಪಿ.ಎಂ ಹರ್ ಘರ್‌ ಸೋಲಾರಿಕರಣಗೊಳಿಸಲು ಕೋಟತಟ್ಟು ಗ್ರಾಮ ಪಂಚಾಯಿತಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಬಗ್ಗೆ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷ ಸತೀಶ ಬಾರಿಕೆರೆ ಯೋಜನೆ ಅನುಷ್ಠಾನದ ಕುರಿತಂತೆ ಮಾಹಿತಿ ಪಡೆದುಕೊಂಡರು.

ಕಾರ್ಯವಾಹಕ ಸಹಾಯಕ ಎಂಜಿನಿಯರ್ ಯಶವಂತ್, ಕೋಟ ವಿಭಾಗದ ಸಹಾಯಕ ಕಾರ್ಯವಾಹಕ ಎಂಜಿನಿಯರ್ ಪ್ರತಾಪ್‌ಚಂದ್ರ ಶೆಟ್ಟಿ, ಸಹಾಯಕ ಎಂಜಿನಿಯರ್ ಶ್ರೀಕಾಂತ್, ಶಾಖಾಧಿಕಾರಿಗಳಾದ ಮಹೇಶ, ವೈಭವ ಶೆಟ್ಟಿ, ಲೆಕ್ಕಾಧಿಕಾರಿ ಗಣೇಶ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.