
ಮೃತ ದಿಶಾ, ಮಧು ಗೌಡ
ಚಿತ್ರ: ಇನ್‌ಸ್ಟಾಗ್ರಾಂ
ಉಡುಪಿ: ಮಲ್ಪೆ ಸಮೀಪದ ಕೋಡಿಬೆಂಗ್ರೆ ಅಳಿವೆ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿಶಾ (23) ಮೃತಪಟ್ಟಿದ್ದಾರೆ. ಇವರು ಕನ್ನಡದ ಯೂಟ್ಯೂಬರ್‌ಗಳಾದ ನಿಶಾ ರವೀಂದ್ರ, ಮಧು ಗೌಡ ಅವರ ಸ್ನೇಹಿತರಾಗಿದ್ದರು.
ಮೃತ ದಿಶಾ ಹಾಗೂ ಮಧು ಗೌಡ
ಮಂಗಳವಾರ ಮೈಸೂರಿನ ಉದಯಗಿರಿಯ ದಿಶಾ ಸೇರಿದಂತೆ ಶಂಕರಪ್ಪ (22), ಸಿಂಧು (23) ಎಂಬುವವರು ದುರಂತದಲ್ಲಿ ಮೃತಪಟ್ಟಿದ್ದರು. ಮಲ್ಪೆ ಬಳಿಯ ಡೆಲ್ಟಾ ಬೀಚ್ ಪಾಯಿಂಟ್‌ನಿಂದ ತೆರಳಿದ್ದ 14 ಮಂದಿ ಪ್ರವಾಸಿಗರಿದ್ದ ದೋಣಿಯು ಹಂಗಾರಕಟ್ಟೆಯ ಸಮೀಪ ಅಳಿವೆಯಲ್ಲಿ ಮಗುಚಿತ್ತು. ಅದರಲ್ಲಿ ಧರ್ಮರಾಜ ಮತ್ತು ದಿಶಾ ಎಂಬುವವರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ದಿಶಾ ನಿನ್ನೆ (ಜ.28)ರಂದು ಮೃತಪಟ್ಟಿದ್ದಾರೆ.
ಮೃತ ದಿಶಾ ಹಾಗೂ ನಿಶಾ ರವೀಂದ್ರ
ಇನ್ನು, ನಿಶಾ ರವೀಂದ್ರ, ಮಧು ಗೌಡ ಮೃತ ದಿಶಾ ಅವರ ಆಪ್ತ ಸ್ನೇಹಿತೆಯಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ನಿಶಾ, ಮಧು ಗೌಡ ಅವರ ಜೊತೆಗೆ ರೀಲ್ಸ್ ಮಾಡುತ್ತಿದ್ದರು. ಗೆಳೆತಿಯನ್ನು ಕಳೆದುಕೊಂಡ ದುಃಖದಲ್ಲಿ ಯೂಟ್ಯೂಬರ್ ಮಧು ಗೌಡ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ದಿಶಾ ಅವರ ಫೋಟೊಗಳನ್ನು ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. ಜೊತೆಗೆ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುವ ಮೂಲಕ ದಿಶಾ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.