ADVERTISEMENT

ದಿಗ್ವಿಜಯ ರಥಯಾತ್ರೆಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 15:58 IST
Last Updated 7 ನವೆಂಬರ್ 2022, 15:58 IST
ದಿಗ್ವಿಜಯ ರಥಯಾತ್ರೆಗೆ ಸೋಮವಾರ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ದಿಗ್ವಿಜಯ ರಥಯಾತ್ರೆಗೆ ಸೋಮವಾರ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.   

ಉಡುಪಿ: ಹಿಂದೂ ಸಮಾಜದ ಜಾಗೃತಿ ಹಾಗೂ ರಾಮರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೆ ಸತ್ಯಾನಂದ ಸರಸ್ವತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹಾಗೂ ಶಕ್ತಿ ಶಾಂತಾನಂದ ಮಹರ್ಷಿಗಳ ನೇತೃತ್ವದಲ್ಲಿ ನಡೆಯುತ್ತಿರುವ ದಿಗ್ವಿಜಯ ರಥಯಾತ್ರೆಗೆ ಸೋಮವಾರ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಶಾಸಕರಾದ ಕೆ.ರಘುಪತಿ ಭಟ್ ದಿಗ್ವಿಜಯ ರಥಯಾತ್ರೆಯನ್ನು ಸ್ವಾಗತಿಸಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಿಶ್ವ ಹಿಂದೂ ಪರಿಷತ್ತು ಅಖಿಲ ಭಾರತೀಯ ಸಂತ ಸಮಿತಿ ಬೆಂಬಲದೊಂದಿಗೆ ದೇಶದಾದ್ಯಂತ ದಿಗ್ವಿಜಯ ಯಾತ್ರೆ ಸಂಚರಿಸುತ್ತಿದೆ. ಯಾತ್ರೆ 60 ದಿನ 27 ರಾಜ್ಯಗಳಲ್ಲಿ 15,000 ಕಿ.ಮೀ ಕ್ರಮಿಸಲಿದೆ. ಗೀತಾ ಜಯಂತಿಯಂದು ಯಾತ್ರೆ ಸಮಾಪನಗೊಳ್ಳಲಿದೆ.

ADVERTISEMENT

ದಿಗ್ವಿಜಯ ಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌, ನಗರಸಭಾ ಸದಸ್ಯ ವಿಜಯ ಕೊಡವೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.