ADVERTISEMENT

ಉಡುಪಿ | ಹೆಣ್ಣುಮಕ್ಕಳಿಗೆ ರಕ್ತಚಂದನ ಸಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 4:34 IST
Last Updated 26 ಜೂನ್ 2022, 4:34 IST
ರಕ್ತಚಂದನ ಗಿಡಗಳು
ರಕ್ತಚಂದನ ಗಿಡಗಳು   

ಬ್ರಹ್ಮಾವರ: ಕಳೆದ 10 ವರ್ಷದಿಂದ ಹಸಿರು ಬೆಳೆಸುವ ಮನೋಭಾವದಿಂದ ಮತ್ತು ಭವಿಷ್ಯದಲ್ಲಿ ಹೆಣ್ಣುಮಕ್ಕಳು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವ ಆಶಯದೊಂದಿಗೆ ಎಸ್.ಡಿ.ಪಿ. ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಹೆಣ್ಣು ಮಕ್ಕಳಿಗೆ ಉಚಿತ ರಕ್ತಚಂದನ ಗಿಡಗಳ ವಿತರಣೆ ಯೋಜನೆ ಹಮ್ಮಿಕೊಳ್ಳಲಾಗಿದೆ.

5 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಪೋಷಕರಿಗೆ ಉಚಿತವಾಗಿ 15 ರಕ್ತಚಂದನ ಗಿಡಗಳನ್ನು ವಿತರಿಸಲು ತೀರ್ಮಾನಿಸಿದ್ದು, ಪ್ರತಿ ಮಗುವಿಗೆ ನೀಡುವ ರಕ್ತಚಂದನ ಗಿಡಗಳು ಮುಂದಿನ 15 ವರ್ಷಗಳಲ್ಲಿ ಉತ್ತಮ ಬೆಲೆ ಬಾಳುವ ಮರಗಳಾಗುತ್ತವೆ. ಇದರಿಂದ ಬರುವ ಮೊತ್ತವು ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೆ ನೆರವಾಗಲಿದೆ.

ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳುವುದರಿಂದ ತನ್ನ ಮಗಳನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವುದರ ಜತೆಗೆ, ಹಸಿರು ಉಳಿಸುವ ಸಂಸ್ಥೆಯ ಯೋಜನೆಯಲ್ಲಿ ಪಾಲ್ಗೊಂಡಂತಾಗುತ್ತದೆ.

ADVERTISEMENT

ಸಂಸ್ಥೆಯು ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ನಾನಾ ಭಾಗದ ರೈತರು 300 ಎಕರೆ ಜಾಗದಲ್ಲಿ 1ಲಕ್ಷಕ್ಕೂ ಕ್ಕೂ ಮಿಕ್ಕಿ ರಕ್ತಚಂದನ ಗಿಡಗಳನ್ನು ಬೆಳೆಸುವಲ್ಲಿ ಸಹಕರಿಸಿದೆ. 5 ವರ್ಷದೊಳಗಿನ ಹೆಣ್ಣು ಮಗುವಿನ ಪೋಷಕರು ಗಿಡ ನೆಡಲು ತೀರ್ಮಾನಿಸಿದ ಸ್ಥಳದ ಆರ್‌ಟಿಸಿ, ಮಗುವಿನ ಭಾವಚಿತ್ರ ಮತ್ತುಜನನ ಪ್ರಮಾಣ ಪತ್ರದ ನಕಲು ಪ್ರತಿಯೊಂದಿಗೆ ಬ್ರಹ್ಮಾವರ ತಾಲ್ಲೂಕಿನ ನೀಲಾವರ ಎಳ್ಳಂಪಳ್ಳಿ, ತಡೆಕಲ್ಲು ಮಹಾಲಿಂಗೇಶ್ವರ ದೇವಸ್ಥಾನ ಸಮೀಪದ ಸಂಸ್ಥೆಯ ಕಚೇರಿಯನ್ನು ಜೂ.30ರ ಒಳಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ದೂ: 9860705863, ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕ ಸತೀಶ್ ಬಿ. ಶೆಟ್ಟಿ ಕಾಡೂರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.