ADVERTISEMENT

₹ 65 ಲಕ್ಷ ಲಾಭ, ಶೇ 17 ಲಾಭಾಂಶ ಘೋಷಣೆ

ಕಿರಿಮಂಜೇಶ್ವರ: ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 4:57 IST
Last Updated 14 ಸೆಪ್ಟೆಂಬರ್ 2025, 4:57 IST
ಕಿರಿಮಂಜೇಶ್ವರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು
ಕಿರಿಮಂಜೇಶ್ವರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು   

ಬೈಂದೂರು: ಕಿರಿಮಂಜೇಶ್ವರದ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಸಂಘದ ವಠಾರದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಅನ್ನಪೂರ್ಣ ಉಡುಪ ಮಾತಮಾಡಿ, ಮಹಿಳಾ ವಿವಿಧೋದ್ದೇಶ ಸಹಕಾರ ಸಂಘವು ₹ 54.94 ಲಕ್ಷ ಪಾಲು ಬಂಡವಾಳ ಹೊಂದಿದ್ದು, ವರ್ಷಾಂತ್ಯಕ್ಕೆ ₹ 28.45 ಕೋಟಿಯಷ್ಟು ಠೇವಣಿ ಹೊಂದಿದೆ. ವರದಿ ವರ್ಷದಲ್ಲಿ ಠೇವಣಿ ಸಂಗ್ರಹಣೆಯಲ್ಲಿ ಶೇ 5.53 ರಷ್ಟು ಹೆಚ್ಚಳವಾಗಿದೆ. ವಾರ್ಷಿಕವಾಗಿ ₹ 101 ಕೋಟಿಗೂ ಅಧಿಕ ವ್ಯವಹಾರ ನಡೆಸಿದೆ. ₹ 24 ಕೋಟಿ ಸಾಲ ನೀಡಿದೆ. ವರದಿ ವರ್ಷದಲ್ಲಿ ₹ 65ಲಕ್ಷ ಲಾಭ ಗಳಿಸಿದೆ. ಶೇ 17ರಷ್ಟು ಲಾಭಾಂಶ ಘೋಷಣೆ ಮಾಡಲಾಗುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಂಘದ ಗ್ರಾಹಕರಿಗಾಗಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಆರಂಭಿಸಲಾಗುವುದು. ಸದಸ್ಯರ ಅನುಕೂಲಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಸಂಘವು ಪಡಿತರ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ₹ 2.31 ಲಕ್ಷ ವ್ಯಾಪಾರ ಲಾಭ ಗಳಿಸಿದೆ. ಮುದ್ರಣ ವಿಭಾಗದಲ್ಲಿ ₹ 57,286ರಷ್ಟು ಲಾಭಗಳಿಸಿದೆ. ಕೃಷಿ ಉತ್ಪನ್ನಗಳ ಮಾರಾಟದಿಂದ ₹ 4.53 ಲಕ್ಷ ಲಾಭ ಗಳಿಸಿದೆ. ಆಡಿಟ್ ವರ್ಗೀಕರಣದಲ್ಲಿ ‘ಬಿ’ ದರ್ಜೆ ವರ್ಗೀಕರಿಸಲಾಗಿದೆ. ಸಂಘದ ವ್ಯಾಪ್ತಿಯಲ್ಲಿ 73 ಮಹಿಳಾ ಸ್ವ-ಸಹಾಯ ಗುಂಪುಗಳನ್ನು ರಚಿಸಿದ್ದು, ಶೇ 11 ಬಡ್ಡಿ ದರದಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷೆ ಗಾಯಿತ್ರಿ ಜಿ.ಶ್ಯಾನುಭಾಗ್, ನಿರ್ದೇಶಕರಾದ ಬಿ.ರತ್ನ ಹೆಬ್ಬಾರ್, ನಾಗವೇಣಿ ಕಾರಂತ, ಪುಷ್ಪಲತಾ ಶ್ಯಾನುಭೋಗ್, ಶಾರದ, ವಸಂತಿ ಪೂಜಾರಿ, ಜಯಲಕ್ಷ್ಮೀ ಹೊಳ್ಳ, ಕಮಲಾಕ್ಷಿ ವಿ.ನಾವಡ, ನಾಗವೇಣಿ ಕೆದ್ಲಾಯ, ರೇಣುಕಾ ನಾಯರಿ, ಸಂಸ್ಥೆಯ ಸದಸ್ಯರು, ಸಿಬ್ಬಂದಿ ಭಾಗವಹಿಸಿದ್ದರು.

ಸಂಘದ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಕೆ. ವರದಿ ಮಂಡಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.