ADVERTISEMENT

ಉಡುಪಿ: ವಾಲಿವಧೆಗೆ ಪ್ರಥಮ ಬಹುಮಾನದ ಗರಿ

ರಂಗಭೂಮಿ ಉಡುಪಿಯ 43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 14:08 IST
Last Updated 6 ಡಿಸೆಂಬರ್ 2022, 14:08 IST
 ರಂಗಭೂಮಿ ಉಡುಪಿ ಸಂಸ್ಥೆಯ 43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ  ಹಾವೇರಿಯ ಗಜಾನನ ಯುವಕ ಮಂಡಲದ ವಾಲಿವಧೆ ನಾಟಕ ಪ್ರಥಮ ಬಹುಮಾನ ಪಡೆದುಕೊಂಡಿದೆ.
 ರಂಗಭೂಮಿ ಉಡುಪಿ ಸಂಸ್ಥೆಯ 43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ  ಹಾವೇರಿಯ ಗಜಾನನ ಯುವಕ ಮಂಡಲದ ವಾಲಿವಧೆ ನಾಟಕ ಪ್ರಥಮ ಬಹುಮಾನ ಪಡೆದುಕೊಂಡಿದೆ.   

ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯ 43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ಹಾವೇರಿಯ ಗಜಾನನ ಯುವಕ ಮಂಡಲದ ವಾಲಿವಧೆ ನಾಟಕಕ್ಕೆ ಪ್ರಥಮ ಬಹುಮಾನ ಲಭಿಸಿದೆ.

ವಿಜೇತ ತಂಡಕ್ಕೆ ಪಿವಿಎಸ್ ಪ್ರಾಯೋಜಿತ ದಿ.ಪುತ್ತು ವೈಕುಂಠ ಶೇಟ್ ಸ್ಮಾರಕ ₹ 35,000 ನಗದು ಪುರಸ್ಕಾರ ಹಾಗೂ ಸ್ಮರಣಿಕೆ, ಡಾ.ಟಿಎಂಎ.ಪೈ ಸ್ಮಾರಕ ಪರ್ಯಾಯ ಫಲಕ ಹಾಗೂ ದಿ.ಎಸ್.ಎಲ್. ನಾರಾಯಣ ಭಟ್ ಸ್ಮಾರಕ ಸ್ಮರಣಿಕೆ ನೀಡಲಾಗುವುದು.

ತೀರ್ಥಹಳ್ಳಿಯ ನಟಮಿತ್ರರು ತಂಡದ ‘ತುರುಬ ಕಟ್ಟುವ ಹದನ’ ನಾಟಕಕ್ಕೆ ದ್ವಿತೀಯ ಬಹುಮಾನ ಲಭಿಸಿದೆ. ವಿಜೇತ ತಂಡಕ್ಕೆ ದಿ.ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ವರಾಜ್ ಪ್ರಾಯೋಜಿತ ₹ 25,000 ನಗದು ಪುರಸ್ಕಾರ ಮತ್ತು ಸ್ಮರಣಿಕೆ ಹಾಗೂ ಡಾ.ಆರ್.ಪಿ.ಕೊಪ್ಪೀಕರ್ ಸ್ಮಾರಕ ಪರ್ಯಾಯ ಫಲಕ, ಯು.ಪಿ. ಶೆಣೈ ಸ್ಮಾರಕ ಸ್ಮರಣಿಕೆ ಪ್ರದಾನ ಮಾಡಲಾಗುವುದು.

ADVERTISEMENT

ತೃತೀಯ ಬಹುಮಾನವನ್ನು ಉಡುಪಿಯ ಬೈಕಾಡಿಯ ಮಂದಾರ ತಂಡದ ‘ಕೊಳ್ಳಿ’ ನಾಟಕ ಪಡೆದುಕೊಂಡಿದೆ. ದಿ.ಪಿ.ವಾಸುದೇವ ರಾವ್ ಸ್ಮರಣಾರ್ಥ ಸೀತಾ ವಾಸುದೇವ ರಾವ್ ಪ್ರಾಯೋಜಿತ ₹ 15,000 ನಗದು, ಸಖೂಬಾಯಿ ಶ್ರೀಧರ ನಾಯಕ್ ಕೊಕ್ಕರ್ಣೆ ಸ್ಮಾರಕ ಸ್ಮರಣಿಕೆ ವಿಜೇತ ತಂಡದ ಪಾಲಾಗಿದೆ.

ಬಹುಮಾನಗಳ ವಿವರ:

ಶ್ರೇಷ್ಠ ನಿರ್ದೇಶಕ ಪ್ರಥಮ ಬಹುಮಾನ ‘ವಾಲಿವಧೆ’ ನಾಟಕದ ನಿರ್ದೇಶಕ ಗಣೇಶ್ ಮಂದಾರ್ತಿ, ದ್ವಿತೀಯ ಬಹುಮಾನ ‘ತುರುಬ ಕಟ್ಟುವ ಹದನ’ ನಾಟಕದ ನಿರ್ದೇಶಕ ಶ್ರೀಕಾಂತ್ ಕುಮಟಗೆ, ತೃತೀಯ ಬಹುಮಾನ ‘ತದ್ರೂಪಿ’ ನಾಟಕದ ನಿರ್ದೇಶಕ ಜೋಸೆಫ್ ಜಾನ್ ಅವರಿಗೆ ಒಲಿದಿದೆ.

ಶ್ರೇಷ್ಠ ನಟ ಬಹುಮಾನ ವಾಲಿ ಪಾತ್ರಧಾರಿ ವೈ.ದೇವಿ ಪ್ರಸಾದ ವೈ (ಪ್ರಥಮ), ಸುಗ್ರೀವ ಪಾತ್ರಧಾರಿ ಎಸ್‌.ಕೆ.ಸಿದ್ದು (ದ್ವಿತೀಯ), ಜನರಲ್ ಪೋಪಟ್ ಪಾತ್ರಧಾರಿ ಎಂ.ವಿ.ಕೀರ್ತಿಭಾನು (ತೃತೀಯ) ಅವರಿಗೆ ದಕ್ಕಿದೆ.

ಶ್ರೇಷ್ಠ ನಟಿ ಪ್ರಶಸ್ತಿ ದ್ರೌಪದಿ ಪಾತ್ರಧಾರಿಣಿ ಪ್ರಿಯಾ ಬ್ರಹ್ಮಾವರ (ಪ್ರಥಮ), ಆರುಂದತಿ ಪಾತ್ರಧಾರಿಣಿ ಪ್ರಜ್ಞಾಶ್ರೀ, ಶೀಲವತಿ ಪಾತ್ರದಾರಿಣಿ ರಂಜಿತಾ ಶೇಟ್ (ದ್ವಿತೀಯ), ಉಜ್ಜಿ ಪಾತ್ರಧಾರಿಣಿ ಶ್ವೇತಾ ಮಣಿಪಾಲ (ತೃತೀಯ).

ಶ್ರೇಷ್ಠ ಸಂಗೀತ ಪ್ರಶಸ್ತಿ ಅನುಷ್ ಶೆಟ್ಟಿ-ಮುನ್ನ-ಗಣೇಶ್ (ಪ್ರಥಮ), ಶ್ರೀಪಾದ್ ತೀರ್ಥಹಳ್ಳಿ (ದ್ವಿತೀಯ), ವಾಸುದೇವ ಗಂಗೇರ (ತೃತೀಯ).

ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ ಪ್ರಶಸ್ತಿ ತುರುಬ ಕಟ್ಟುವ ಹದನ (ಪ್ರಥಮ), ವಾಲಿವಧೆ (ದ್ವಿತೀಯ), ಸೂರ್ಯಾಸ್ತದಿಂದ ‌ಸೂರ್ಯೋದಯದವರೆಗೆ (ತೃತೀಯ).

ಶ್ರೇಷ್ಠ ಪ್ರಸಾಧನ ಪ್ರಶಸ್ತಿ ನಿರಂಜನ್ ಪವರ್(ಪ್ರಥಮ), ಪೃಥ್ವಿನ್ ಕೆ. ವಾಸು(ದ್ವಿತೀಯ), ರಮೇಶ್ ಕಪಿಲೇಶ್ವರ (ತೃತೀಯ).

ಶ್ರೇಷ್ಠ ರಂಗ ಬೆಳಕು ಪ್ರಶಸ್ತಿ ರಾಜು ಮಣಿಪಾಲ (ಪ್ರಥಮ), ಪೃಥ್ವಿನ್ ಕೆ. ವಾಸು (ದ್ವಿತೀಯ), ಚಂದನ್ (ತೃತೀಯ).

ಶ್ರೇಷ್ಠ ಹಾಸ್ಯ ನಟನೆ ಪ್ರಶಸ್ತಿ ಉತ್ತರ ಕುಮಾರ ಪಾತ್ರಧಾರಿ ಎಂ.ಎಸ್‌.ನಂದನ್, ಶ್ರೇಷ್ಠ ಬಾಲ ನಟನೆ ಪ್ರಶಸ್ತಿ ಬಾಲ ಸುಗ್ರೀವ ಪಾತ್ರಧಾರಿ ಬಿ. ಉದಯ್ ಅವರಿಗೆ ಲಭಿಸಿದೆ.

ಮೆಚ್ಚುಗೆ ಬಹುಮಾನಗಳು:ಸುಯೋಧನ ಪಾತ್ರಧಾರಿ ಶಿವು ಹೊನ್ನಿಗನ ಹಳ್ಳಿ, ತದ್ರೂಪಿ ಪಾತ್ರಧಾರಿ ಕೃಷ್ಣ ಹೆಬ್ಬಾಲೆ, ಓಕ್ಕಾಕ ಪಾತ್ರಧಾರಿ ಸುನಿಲ್ ಪಾಂಡೇಶ್ವರ, ದುರ್ಯೋಧನ ಪಾತ್ರಧಾರಿ ಶರತ್ ಕುಮಾರ್, ಪೂಲನ್ ದೇವಿ ಪಾತ್ರಧಾರಿಣಿ ನಯನಾ ಜೆ. ಸೂಡ ಅವರನ್ನು ಆಯ್ಕೆ ಮಾಡಲಾಗಿದೆ.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಪಿವಿಎಸ್ ಗ್ರೂಪ್ಸ್ ಮಂಗಳೂರು, ಎಂಜಿಎಂ ಕಾಲೇಜು ಉಡುಪಿ ಹಾಗೂ ಹಲವು ಸಂಸ್ಥೆಗಳು ಹಾಗೂ ಕಲಾ ಪೋಷಕರ ಸಹಕಾರದೊಂದಿಗೆ ನ.23 ರಿಂದ ಡಿ.4ರವರೆಗೆ 12 ದಿನ ರಾಜ್ಯ ಮಟ್ಟದ ನಾಟಕ ಸ್ಪರ್ಧೆ ನಡೆಯಿತು.

ಸ್ಪರ್ಧೆಯ ತೀರ್ಪುಗಾರರಾಗಿ ಉಡುಪಿಯ ಕೆ.ಲಕ್ಷ್ಮೀನಾರಾಯಣ ಭಟ್, ಜಿ.ಪಿ.ಪ್ರಭಾಕರ್ ತುಮುರಿ, ಛಾಯಾ ಭಾರ್ಗವಿ, ಸಿದ್ದರಾಜು ಎಸ್.ಎಸ್, ರಿಯಾಜ್ ಸಿಹಿಮೊಗೆ ಸಹಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.