ADVERTISEMENT

ಉಡುಪಿ | ಶೈಕ್ಷಣಿಕ ಶುಲ್ಕ ವಸೂಲಿ: ದೂರು

‘ರಚನಾ ಹೋರಾಟ ಸಮಿತಿ’ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 14:13 IST
Last Updated 1 ಜೂನ್ 2020, 14:13 IST
ಚಿತ್ರ( ಮನವಿ) ಬ್ರಹ್ಮಾವರ ಪರಿಸರದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಜೂನ್ ತಿಂಗಳ ಶುಲ್ಕ ಸಂಗ್ರಹಿಸುತ್ತಿರುವುದರ ವಿರುದ್ಧ ತಾಲ್ಲೂಕು ರಚನಾ ಹೋರಾಟ ಸಮಿತಿಯಿಂದ ಸೋಮವಾರ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿಗೆ ಮನವಿ ನೀಡಲಾಯಿತು.
ಚಿತ್ರ( ಮನವಿ) ಬ್ರಹ್ಮಾವರ ಪರಿಸರದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಜೂನ್ ತಿಂಗಳ ಶುಲ್ಕ ಸಂಗ್ರಹಿಸುತ್ತಿರುವುದರ ವಿರುದ್ಧ ತಾಲ್ಲೂಕು ರಚನಾ ಹೋರಾಟ ಸಮಿತಿಯಿಂದ ಸೋಮವಾರ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿಗೆ ಮನವಿ ನೀಡಲಾಯಿತು.   

ಬ್ರಹ್ಮಾವರ: ಪ್ರಸಕ್ತ ಸಾಲಿನ ತರಗತಿ ಪ್ರಾರಂಭದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿದ್ದರೂ ಬ್ರಹ್ಮಾವರ ಪರಿಸರದ ಇಂಗ್ಲಿಷ್‌ ಶಾಲೆಗಳಲ್ಲಿ ಜೂನ್ ತಿಂಗಳ ಶುಲ್ಕ ಸಂಗ್ರಹಿಸುತ್ತಿರುವುದರ ವಿರುದ್ಧ ತಾಲ್ಲೂಕು ‘ರಚನಾ ಹೋರಾಟ ಸಮಿತಿ’ಯಿಂದ ಸೋಮವಾರ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿಗೆ ಮನವಿ ನೀಡಲಾಯಿತು.

‘ಹಿಂದಿನ ಸಾಲಿನ ಶುಲ್ಕವನ್ನು ಮೇ ತಿಂಗಳ ವರೆಗೆ ಈಗಾಗಲೇ ಪಡೆಯಲಾಗಿದೆ. ಇದೀಗ ಜೂನ್‌ನಿಂದ ಹೊಸ ವರ್ಷದ ಶುಲ್ಕವನ್ನು ನೀಡುವಂತೆ ಒತ್ತಾಯಿಸಲಾಗುತ್ತಿದೆ. ಕೋವಿಡ್‌ ಆಘಾತದಿಂದ ಪೋಷಕರು ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಗಳು ವರ್ತಿಸುತ್ತಿರುವುದು ಹಗಲು ದರೋಡೆಯಂತಾಗಿದೆ. ಶಿಕ್ಷಣ ನೀಡದೆ ಶಿಕ್ಷಣ ಶುಲ್ಕ, ಸಾರಿಗೆ ಬಳಸದೆ ಸಾರಿಗೆ ಶುಲ್ಕ ಪಡೆಯುವುದು ಒಂದು ಕಡೆಯಾದರೆ, ಅದೇ ಶಾಲೆಗಳ ಬೋಧಕ, ಬೋಧಕೇತರ ಸಿಬ್ಬಂದಿಗೆ ಮೇ ತಿಂಗಳಿನಿಂದಲೇ ಅರ್ಧ ವೇತನವನ್ನು ನೀಡುತ್ತಿರುವುದು ದ್ವಿಮುಖ ನೀತಿಯಾಗಿದೆ. ಆಡಳಿತ ಮಂಡಳಿಯು ಬೇರೆ ಬೇರೆ ಕಾರಣ ನೀಡಿ ಪೂರ್ತಿ ವರ್ಷ ಶುಲ್ಕದ ಹೊರೆಯನ್ನು ಹಾಕುವ ಅನುಮಾನವಿದ್ದು, ಶಿಕ್ಷಣ ಸಚಿವರು, ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಲಾಗಿದೆ.

ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಬಾರ್ಕೂರು ಸತೀಶ್ ಪೂಜಾರಿ, ಪ್ರಮುಖರಾದ ಉದಯ ಕಾಮತ್, ಅರುಣ್ ಭಂಡಾರಿ, ಉದಯ ಕುಮಾರ್, ಜಯಂತಿ ವಾಸುದೇವ್, ಸದಾಶಿವ ಶೆಟ್ಟಿ, ರಾಘವೇಂದ್ರ ಕೊಳಂಬೆ, ಸತ್ಯರಾಜ್ ಬಿರ್ತಿ, ಹರಿಶ್ಚಂದ್ರ ಪೂಜಾರಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.