
ಪಡುಬಿದ್ರಿ: ಶ್ರೀ ಜನಾರ್ದನ ಕಂಬಳ ಸಮಿತಿಯ ಆಶ್ರಯದಲ್ಲಿ ಹೊನಲು ಬೆಳಕಿನ ಚೊಚ್ಚಲ ಎರ್ಮಾಳು ತೆಂಕ-ಬಡಾ ಜೋಡುಕರೆ ಕಂಬಳ ಬಾಕಿಮಾರು ಗದ್ದೆಯಲ್ಲಿ ಶನಿವಾರ ಆರಂಭಗೊಂಡಿತು.
ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಹಾಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸಿ ಕಂಬಳದ ಕೋಣ ಓಡಿಸುವ ಓಟಗಾರರಿಂದ ಜ್ಯೋತಿಯನ್ನು ಕಂಬಳ ಕರೆಗೆ ಬರಮಾಡಿಕೊಳ್ಳಲಾಯಿತು.
ಮುಂಜಾನೆ ಕಂಬಳ ಕರೆಯಲ್ಲಿ ಪಡುಬಿದ್ರಿ ಮುರಳೀಧರ ಆಚಾರ್ಯ ಸಹಕಾರದಲ್ಲಿ ಬೆಳ್ಮಣ್‌ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಘ್ನೇಶ ಭಟ್ಟರಿಂದ ಆದ್ಯ ಗಣಯಾಗ ನಡೆಯಿತು. ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕರಾಜ ಎರ್ಮಾಳು ಬೀಡು ಅವರು ಕಂಬಳದ ಧ್ವಜಾರೋಹಣ ಮಾಡಿದರು.
ಬೆಳ್ಮಣ್ ವಿಘ್ನೇಶ್ ಭಟ್ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಶಾಸಕ ಸುರೇಶ್ ಬಾಬು, ಮುಂಬಯಿ ಉದ್ಯಮಿ ಮುಂಡಪ್ಪ ಪೈಯ್ಯಡೆ, ಮಹಾರಾಷ್ಟ್ರ ಸಂಸದ ಗೋಪಾಲ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ, ಕಾರ್ಯಾಧ್ಯಕ್ಷ ಸೀತಾರಾಮ ಎಲ್.ಶೆಟ್ಟಿ, ಮುಖಂಡರಾದ ಸುರೇಶ್ ಜಿ. ಶೆಟ್ಟಿ, ಚಂದ್ರಹಾಸ ಎಲ್.ಶೆಟ್ಟಿ, ಎರ್ಮಾಳು ಹರೀಶ್ ಶೆಟ್ಟಿ, ಚಿಂತನ್ ಹೆಗ್ಡೆ ಎರ್ಮಾಳು, ಜಗಜೀವನ್ ಚೌಟ, ಕರುಣಾಕರ್ ಪ್ರಭಾಕರ ಹೆಗ್ಡೆ, ಸಂತೋಷ್ ಶೆಟ್ಟಿ ಬರ್ಪಾಣಿ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.