ADVERTISEMENT

ರೈತ ದುಡಿದರೆ ಮಾತ್ರ ಮನುಕುಲದ ಉಳಿವು: ಐರೋಡಿ ರಘುರಾಮ ಮಡಿವಾಳ

ಕೃಷಿಕ ಐರೋಡಿ ರಘುರಾಮ ಮಡಿವಾಳಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 12:32 IST
Last Updated 1 ಜೂನ್ 2025, 12:32 IST
ಪ್ರಗತಿಪರ ಕೃಷಿಕ ಐರೋಡಿಯ ರಘುರಾಮ ಮಡಿವಾಳ ದಂಪತಿಗಳನ್ನು ಕೃಷಿ ಪರಿಕರಗಳನ್ನಿತ್ತು ಗೌರವಿಸಲಾಯಿತು.
ಪ್ರಗತಿಪರ ಕೃಷಿಕ ಐರೋಡಿಯ ರಘುರಾಮ ಮಡಿವಾಳ ದಂಪತಿಗಳನ್ನು ಕೃಷಿ ಪರಿಕರಗಳನ್ನಿತ್ತು ಗೌರವಿಸಲಾಯಿತು.   

ಸಾಸ್ತಾನ (ಬ್ರಹ್ಮಾವರ): ರೈತ ಹೊಲದಲ್ಲಿ ದುಡಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ. ಇಲ್ಲದೊದ್ದರೆ ಕಷ್ಟಕರ ದಿನಗಳನ್ನು ನಾವು ಕಾಣಬೇಕಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ ಕುಮಾರ್ ಹೇಳಿದರು.

ಕೋಟ ಪಂಚವರ್ಣ ಯುವಕ ಮಂಡಲ, ಮಹಿಳಾ ಮಂಡಳಿ ನೇತೃತ್ವದಲ್ಲಿ ಗೀತಾನಂದ ಫೌಂಡೇಷನ್, ರೈತಧ್ವನಿ ಸಂಘ, ಕಾರ್ಕಡ ಗೆಳೆಯರ ಬಳಗ, ಮಣೂರು ಸ್ನೇಹಕೂಟ, ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ರೈತರೆಡೆಗೆ ನಮ್ಮ ನಡಿಗೆ 46ನೇ ಮಾಲಿಕೆಯಲ್ಲಿ ಅವರು ಮಾತನಾಡಿದರು.

ಕೃಷಿ ಕಾಯಕದಿಂದ ವಿಮುಖರಾಗದಂತೆ ಪ್ರತಿಯೊಬ್ಬರೂ ಯೋಚಿಸಬೇಕಿದೆ. ಯುವ ಸಮೂಹ ಕೃಷಿ ಕಾರ್ಯದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಪ್ರಗತಿಪರ ಕೃಷಿಕ ಐರೋಡಿಯ ರಘುರಾಮ ಮಡಿವಾಳ ದಂಪತಿಯನ್ನು ಕೃಷಿ ಪರಿಕರಗಳನ್ನಿತ್ತು ಗೌರವಿಸಲಾಯಿತು. ಪಂಚವರ್ಣದ ಅಧ್ಯಕ್ಷ ಕೆ. ಮನೋಹರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಸಾಂಸ್ಕೃತಿಕ ಚಿಂತಕ ಭೀಷ್ಮಗೋಪಾಲ, ಸ್ನೇಹಕೂಟದ ಖಜಾಂಚಿ ವಿಜಯಲಕ್ಷ್ಮೀ ಭಟ್, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ ಗಾಣಿಗ, ಮಹಿಳಾ ಮಂಡಲದ ಪೂರ್ವಾಧ್ಯಕ್ಷೆ ಲಲಿತಾ ಪೂಜಾರಿ ಭಾಗವಹಿಸಿದ್ದರು.

ಮಹಿಳಾ ಮಂಡಳಿ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಮಹೇಶ ಬೆಳಗಾವಿ ವಂದಿಸಿದರು. ಮಹಿಳಾ ಮಂಡಳಿ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.