ADVERTISEMENT

ಯಕ್ಷಗಾನ ಕಲಾವಿದ ಹಾಗೂ ಸಾಹಿತಿ ಸಂಜೀವ ಸುವರ್ಣರಿಗೆ ಕಾರಂತ ಪುರಸ್ಕಾರ

ಶಿವರಾಮ ಕಾರಂತರ ಜನ್ಮದಿನದ ನೆನಪಿನಲ್ಲಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 4:44 IST
Last Updated 13 ಸೆಪ್ಟೆಂಬರ್ 2022, 4:44 IST
ಸಂಜೀವ ಸುವರ್ಣ
ಸಂಜೀವ ಸುವರ್ಣ   

ಸಾಲಿಗ್ರಾಮ: ಡಾ.ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕಾರ್ಕಡ ಗೆಳೆಯರ ಬಳಗ ಕೊಡಮಾಡುವ ಕಾರಂತ ಪುರಸ್ಕಾರಕ್ಕೆ ಕಾರಂತರ ಒಡನಾಡಿ, ಯಕ್ಷಗಾನ ಕಲಾವಿದ ಹಾಗೂ ಸಾಹಿತಿ ಬನ್ನಂಜೆ ಸಂಜೀವ ಸುವರ್ಣ ಭಾಜನರಾಗಿದ್ದಾರೆ.

ಪುರಸ್ಕಾರ ಪ್ರದಾನ ಸಮಾರಂಭ ಅಕ್ಟೋಬರ್ 15ರಂದು ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ತಿಳಿಸಿದ್ದಾರೆ.

ಉಡುಪಿಯ ಬನ್ನಂಜೆಯವರಾದ ಸಂಜೀವ ಸುವರ್ಣ ಯಕ್ಷಗಾನ ಕಲೆಯ ವಿವಿಧ ಆಯಾಮಗಳನ್ನು ಕಾರಂತರು ಒಳಗೊಂಡಂತೆ 21 ಗುರುಗಳಿಂದ ಕಲಿತು ಪರಿಣತಿ ಪಡೆದು ಗುರುವಾಗಿ ಬೆಳೆದು, ದೇಶ ವಿದೇಶಗಳಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

ADVERTISEMENT

ಭರತನಾಟ್ಯ, ಕೂಡಿಯಾಟ್ಟಂ, ಕಥಕ್, ನಾಟಕ ಕಲೆಯಲ್ಲೂ ಪರಿಣತಿ ಪಡೆದಿದ್ದಾರೆ. ಯಕ್ಷಗಾನ ಬ್ಯಾಲೆಗೂ ಖ್ಯಾತಿ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.