ADVERTISEMENT

ಕಲೆಯಾಗಿ ಅರಳಿದ ಶೋಷಿತರ ನೋವು: ಶಿಲ್ಪಾ ಭಟ್‍

ಭಾವನಾ ಪೌಂಡೇಷನ್ ಹಾವಂಜೆ, ಭಾಸ ಗ್ಯಾಲರಿ–ಸ್ಟುಡಿಯೊ, ವೆಂಟನಾ ಫೌಂಡೇಷನ್‍ ಸಹಯೋಗದಲ್ಲಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:56 IST
Last Updated 1 ಮಾರ್ಚ್ 2026, 8:56 IST
ಜನಪದ ದೇಶೀಯ ಕಲೆಗಳ ಕಾರ್ಯಾಗಾರ ಉದ್ಘಾಟನೆಗೊಂಡಿತು  
ಜನಪದ ದೇಶೀಯ ಕಲೆಗಳ ಕಾರ್ಯಾಗಾರ ಉದ್ಘಾಟನೆಗೊಂಡಿತು     

ಉಡುಪಿ: ದೇಶೀಯ ಕಲೆಗಳು ಉಳಿಯುವಂತಾಗಲು ಕಾರ್ಯಾಗಾರಗಳು ಸಹಕಾರಿ. ಕಲೆ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ವಿವಿಧ ನೂತನ ಪ್ರಯೋಗ ಹಾಗೂ ಕಾರ್ಯಕ್ರಮಗಳಿಗೆ ವೆಂಟನಾ ಫೌಂಡೇಷನ್ ಸಹಕಾರ ನೀಡುತ್ತದೆ ಎಂದು  ಫೌಂಡೇಷನ್‍ನ ನಿರ್ದೇಶಕಿ ಶಿಲ್ಪಾ ಭಟ್‍ ಅಭಿಪ್ರಾಯಪಟ್ಟರು.

ಭಾವನಾ ಪೌಂಡೇಷನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೊ, ಉಡುಪಿಯ ವೆಂಟನಾ ಫೌಂಡೇಷನ್‍ನ ಸಹಯೋಗದಲ್ಲಿ ಬಡಗುಪೇಟೆಯ ಗ್ಯಾಲರಿಯಲ್ಲಿ ಶನಿವಾರ ಆಯೋಜಿಸಿದ್ದ ಜನಪದ ದೇಶೀಯ ಕಲೆಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕದಿಕೆ ಟ್ರಸ್ಟ್‌ನ ಸ್ಥಾಪಕ ನಿರ್ದೇಶಕಿ ಮಮತಾ ರೈ ಮಾತನಾಡಿ, ಬಟ್ಟೆಯ ಮೇಲಿನ ಮಾತಾ ನಿ ಪಚೆಡಿ ಕಲೆಯು ಶೋಷಣೆಗೆ ಒಳಪಟ್ಟ ಒಂದು ಸಮುದಾಯದ ನೋವೇ ಕಲೆಯಾಗಿ ಮಾರ್ಪಾಟಾದ ಹಿನ್ನೆಲೆಯುಳ್ಳದ್ದು. ನಮ್ಮಲ್ಲಿನ ವಿನ್ಯಾಸಗಾರಿಕೆಯ ಪದವಿ ಪಡೆಯುತ್ತಿರುವ ಯುವ ಸಮುದಾಯಕ್ಕೆ ಈ ಭಾರತೀಯ ಕಲೆಗಾರಿಕೆಯ ತಾಂತ್ರಿಕ ಅಂಶಗಳು ವಿನೂತನ ಪ್ರಯೋಗಕ್ಕೆ ಎಡೆಮಾಡಿಕೊಡಬಲ್ಲುದು ಎಂದರು.

ADVERTISEMENT

ಬಡಗುಪೇಟೆ ಗ್ಯಾಲರಿಯ ಸಂತೋಷ್ ಪೈ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕ ಜನಾರ್ದನ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ಜಗದೀಶ್ ಚಿತ್ತಾರ ಅವರು ಕಲಾ ಕಾರ್ಯಾಗಾರದ ಭಾಗವಾಗಿ ಬಟ್ಟೆಯ ಮೇಲೆ ರಚಿಸುವ ಗುಜರಾತ್‍ನ ಕಲಂಕಾರಿ ಹಾಗೂ ಮಾತಾ ನಿ ಪಚೇಡಿ ಕಲೆಯನ್ನು ಆಸಕ್ತರಿಗೆ ಕಲಿಸಿಕೊಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.