ADVERTISEMENT

ಫುಟ್‌ಪಾತ್ ಅತಿಕ್ರಮಣ ತೆರವು: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 14:52 IST
Last Updated 2 ಡಿಸೆಂಬರ್ 2021, 14:52 IST
ಉಡುಪಿ ನಗರದಲ್ಲಿ ಫುಟ್‌ಪಾತ್‌ನಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದವರನ್ನು ಗುರುವಾರ ನಗರಸಭೆ ಅಧಿಕಾರಿಗಳು ತೆರವು ಗೊಳಿಸಿದರು.
ಉಡುಪಿ ನಗರದಲ್ಲಿ ಫುಟ್‌ಪಾತ್‌ನಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದವರನ್ನು ಗುರುವಾರ ನಗರಸಭೆ ಅಧಿಕಾರಿಗಳು ತೆರವು ಗೊಳಿಸಿದರು.   

ಉಡುಪಿ: ಫುಟ್‌ಪಾತ್‌ನಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದವರನ್ನು ಗುರುವಾರ ನಗರಸಭೆ ಅಧಿಕಾರಿಗಳು ತೆರವು ಗೊಳಿಸಿದರು.

ನಗರಸಭೆ ಪೌರಾಯುಕ್ತ ಉದಯ್‌ಶೆಟ್ಟಿ ನೇತೃತ್ವದ ತಂಡ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿತು. ಪಾದಚಾರಿ ಮಾರ್ಗಗಳಲ್ಲಿ ಜಾಹೀರಾತು ಫಲಕಗಳನ್ನು ಅಡ್ಡಲಾಗಿ ಇಟ್ಟಿದ್ದವರಿಗೆ ದಂಡ ಹಾಕುವ ಎಚ್ಚರಿಕೆ ನೀಡಿ ತೆರವುಗೊಳಿಸಿತು.

ಅಧಿಕಾರಿಗಳು ಏಕಾಏಕಿ ತೆರವು ಕಾರ್ಯ ನಡೆಸಿದ್ದನ್ನು ವಿರೋಧಿಸಿ ಫುಟ್ ಪಾತ್ ವ್ಯಾಪಾರಿಗಳು ವಾಗ್ವಾದ ನಡೆಸಿದರು. ಕಾರ್ಯಾಚರಣೆ ವೇಳೆ ಅಧಿಕಾರಿಗಳಾದ ಕರುಣಾಕರ್, ಧನಂಜಯ್‌, ಸಂಚಾರ ಠಾಣೆ ಪಿಎಸ್‌ಐ ಖಾದರ್ ಷಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.