ADVERTISEMENT

ಬ್ರಹ್ಮಾವರ: ವಿವಿಧೆಡೆ ಗಾಂಧಿ, ಶಾಸ್ತ್ರಿ ಜಯಂತಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 6:08 IST
Last Updated 5 ಅಕ್ಟೋಬರ್ 2025, 6:08 IST
ಕೋಟ ಬ್ಲಾಕ್ ಕಾಂಗ್ರೆಸ್‌ನ ಇಂದಿರಾ ಭವನದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಕೋಟ ಬ್ಲಾಕ್ ಕಾಂಗ್ರೆಸ್‌ನ ಇಂದಿರಾ ಭವನದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.   

ಬ್ರಹ್ಮಾವರ: ಇಲ್ಲಿನ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಗಾಂಧೀಜಿ ಅಹಿಂಸಾ ತತ್ವದಿಂದ ಪ್ರಪಂಚದ ಎಲ್ಲಾ ಜನರ ಮನಸ್ಸನ್ನು ಗೆದ್ದವರು. ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಸರಳತೆಯಿಂದ ಬದುಕಿದವರು. ಅವರ ಜೈ ಜವಾನ್ ಜೈ ಕಿಸಾನ್ ಘೋಷವಾಕ್ಯ ರೈತರು, ಸೈನಿಕರ ಕುರಿತು ಅವರಿಗಿರುವ ಕಾಳಜಿ, ಗೌರವವನ್ನು ಎತ್ತಿ ತೋರಿಸುತ್ತದೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ಸೀತರಾಮ ಗೌಡ ಶಾಸ್ತ್ರೀಯವರು ದೇಶಕ್ಕೆ ನೀಡಿದ ಕೊಡುಗೆಗಳು, ದಿನೇಶ್‌ ಅವರು ಗಾಂಧೀಜಿಯವರ ಜೀವನ ಸಾಧನೆ, ತತ್ವಗಳ ಕುರಿತು ಮಾಹಿತಿ ನೀಡಿದರು. ಸಿಬ್ಬಂದಿ ವರ್ಗ ಮಹಾನ್ ನಾಯಕರ ಸಂದೇಶಗಳನ್ನು ಪಾಲಿಸಿ, ಪರಿಸರ ಸಂರಕ್ಷಣೆ, ದೇಶದ ಸಮಗ್ರತೆ ಎತ್ತಿ ಹಿಡಿಯುವುದಾಗಿ ಪ್ರತಿಜ್ಞೆ ಮಾಡಿದರು. 

ADVERTISEMENT

ಅಹಿಂಸೆ ಮೂಲಕ ಅವಿರತವಾಗಿ ಹೋರಾಟ ನಡೆಸಿ ಬ್ರಿಟಿಷರ ಕಪಿ ಮುಷ್ಟಿಯಲ್ಲಿದ್ದ ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿಸುವ ಮೂಲಕ ಸತ್ಯ ,ಶಾಂತಿ, ಅಹಿಂಸೆಯೇ ಯಶಸ್ಸಿನ ಮೂಲಮಂತ್ರವೆಂದು ಜಗತ್ತಿಗೆ ಸಾರಿದವರು ಮಹಾತ್ಮ ಗಾಂಧೀಜಿ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ. ಕುಂದರ್ ಹೇಳಿದರು.

ಕೋಟ ಬ್ಲಾಕ್ ಕಾಂಗ್ರೆಸ್‌ನ ಇಂದಿರಾ ಭವನದಲ್ಲಿ ನಡೆದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪುಷ್ಪಾಚರಣೆ ಸಲ್ಲಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವಿರೋಧ ಪಕ್ಷದ ನಾಯಕ ಶ್ರೀನಿವಾಸ ಅಮೀನ್, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಶೇಖರ್ ಪಿ. ಮರಕಾಲ, ಅಚ್ಚುತ್ ಪೂಜಾರಿ, ಮಹಾಬಲ ಮಡಿವಾಳ, ಪಾಂಡೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ. ಬಿ ರಾಘವೇಂದ್ರ, ರಾಜೇಶ್ ನೆಲ್ಲಿಬೆಟ್ಟು, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ರಮೇಶ್ ಮೆಂಡನ್ ಬಡಾಹೋಳಿ, ಯಾಶಿನ್ ಪಡುಕೆರೆ, ಸಚಿನ್ ಶೆಟ್ಟಿ ವಡ್ಡರ್ಸೆ, ನಾಗೇಶ ಪೂಜಾರಿ ಪಡುಕೆರೆ, ಸುರೇಶ ನೆಲ್ಲಿಬೆಟ್ಟು, ಗಿರೀಶ ತೋಡ್ಕಟ್ಟು, ರಮೇಶ ಮೂಡ್ಹೋಳಿ, ಮಂಜುನಾಥ ಪೂಜಾರಿ ಗುಂಡ್ಮಿ, ಹಾರುನ್ ಸಾಹೇಬ್ ಗುಂಡ್ಮಿ, ರಾಜು ಪೂಜಾರಿ ತೋಡ್ಕಟ್ಟು ಭಾಗವಹಿಸಿದ್ದರು. ಕೋಟ ವ್ಯವಸಾಯಕ ಬ್ಯಾಂಕ್‌ ನಿರ್ದೇಶಕ ರವೀಂದ್ರ ಕಾಮತ್ ಗುಂಡ್ಮಿ ಸ್ವಾಗತಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕೋಟ ಹೋಬಳಿ ಶಾಖೆ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು. ಜಿಲ್ಲಾ ಪ್ರಧಾನ ಸಂಚಾಲಕ ಟಿ. ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕ ಶಾಮ್ ಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಕುಂದಾಪುರ ತಾಲ್ಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನಮನೆ, ಕುಮಾರ್ ಕೋಟ, ಕೋಟ ಹೋಬಳಿ ಶಾಖೆ ಸಂಚಾಲಕ ನಾಗರಾಜ ಪಡುಕರೆ, ಕುಂದಾಪುರ ತಾಲ್ಲೂಕು ಸಂಘಟನಾ ಸಂಚಾಲಕ ಚಂದ್ರ ಕೊರ್ಗಿ, ವಿಜಯ ಗಿಳಿಯಾರ್, ರೈತ ಧ್ವನಿ ಕೋಟ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಗೋಪಾಲ ಗಿಳಿಯಾರು, ದಿನೇಶ ಹೊಸಮಠ, ದಿನೇಶ್ ಮೊಳಹಳ್ಳಿ ಭಾಗವಹಿಸಿದ್ದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಕೋಟ ಹೋಬಳಿ ಶಾಖೆಯ ವತಿಯಿಂದ ಮಹಾತ್ಮ ಗಾಂಧೀ ಜಯಂತಿ ಆಚರಿಸಲಾಯಿತು.
ಬ್ರಹ್ಮಾವರ ಜಿ.ಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.