ADVERTISEMENT

ಉಡುಪಿಯಲ್ಲಿ ಬಲೆಗೆ ಬಿದ್ದ ಘೋಲ್ ಮೀನು: ₹ 1.90 ಲಕ್ಷಕ್ಕೆ ಮಾರಾಟ!

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 2:31 IST
Last Updated 24 ನವೆಂಬರ್ 2021, 2:31 IST
ಘೋಲ್‌’ ಮೀನು
ಘೋಲ್‌’ ಮೀನು   

ಉಡುಪಿ: ಮಲ್ಪೆಯ ಮೀನುಗಾರ ಶಾನ್‌ರಾಜ್ ತೊಟ್ಟಂ ಅವರ ಬಲೆಗೆ ಬೆಲೆಬಾಳುವ ‘ಘೋಲ್‌’ ಮೀನು ಬಿದ್ದಿದೆ. 20 ಕೆ.ಜಿ ತೂಕದ ಮೀನು ಹರಾಜಿನಲ್ಲಿ ಬರೋಬ್ಬರಿ 1.90 ಲಕ್ಷಕ್ಕೆ ಮಾರಾಟವಾಗಿದೆ. ಉದ್ಯಮಿ ಫಯಾಜ್ ಮೀನನ್ನು ಖರೀದಿಸಿದ್ದಾರೆ.

ಘೋಲ್ ಫಿಶ್‌ ಔಷಧೀಯ ಗುಣಗಳನ್ನು ಹೊಂದಿರುವ ಮೀನಾಗಿದ್ದು, ಅದರ ಉತ್ಪನ್ನಗಳು ಸೌಂದರ್ಯ ವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಜತೆಗೆ, ಐಶಾರಾಮಿ ಹೋಟೆಲ್‌ಗಳಲ್ಲಿ ದೊರೆಯುವ ಘೋಲ್‌ ಫಿಶ್ ಮೀನಿನ ಖಾದ್ಯಕ್ಕೆ ಹೆಚ್ಚು ಬೇಡಿಕೆ ಇದೆ.

ಘೋಲ್ ಫಿಶ್‌ ಹೆಚ್ಚಾಗಿ ಸಮುದ್ರದಾಳದಲ್ಲಿ ಬದುಕುವ ಮೀನಾಗಿದ್ದು ಕರಾವಳಿಯ ಸಮುದ್ರ, ಶ್ರೀಲಂಕಾ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತ್ತವೆ ಎನ್ನುತ್ತಾರೆ ತಜ್ಞರು. ಮತ್ತೊಂದೆಡೆ ನವೀನ್ ಸಾಲ್ಯಾನ್ ಎಂಬುವರಿಗೆ 30 ಕೆ.ಜಿ ತೂಕದ ಕಾಂಡೈ ಮೀನು ಸಿಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.