ADVERTISEMENT

ಉಡುಪಿ: ಬಲೆಗೆ ಬಿದ್ದ ದೈತ್ಯಾಕಾರದ ತೊರಕೆ ಮೀನು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 10:38 IST
Last Updated 21 ಅಕ್ಟೋಬರ್ 2020, 10:38 IST
ದೈತ್ಯಾಕಾರದ ತೊರಕೆ ಮೀನು
ದೈತ್ಯಾಕಾರದ ತೊರಕೆ ಮೀನು   

ಉಡುಪಿ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುಭಾಶ್ ಸಾಲಿಯಾನ್ ಅವರ ಬಲೆಗೆ ದೈತ್ಯಾಕಾರದ ತೊರಕೆ ಮೀನುಗಳು ಸಿಕ್ಕಿಬಿದ್ದಿವೆ. ಒಂದು ಮೀನು 750 ಕೆ.ಜಿ ತೂಗಿದರೆ ಮತ್ತೊಂದು 250 ಕೆ.ಜಿ ಇದೆ.

ಬೋಟ್‌ನಿಂದ ಮೀನುಗಳನ್ನು ಕ್ರೇನ್ ಸಹಾಯದಿಂದ ಬಂದರಿಗೆ ಇಳಿಸಲಾಯಿತು. ಈ ಮೀನಿಗೆ ಸ್ಥಳೀಯವಾಗಿ ಎರಡು ಕೊಂಬು ತೊರಕೆ ಎಂದು ಕರೆಯುತ್ತಾರೆ. ಈ ವರ್ಷ ಸಿಕ್ಕ ದೊಡ್ಡಗಾತ್ರದ ಮೀನುಗಳನ್ನು ನೋಡಲು ಬಂದರಿಗೆ ನೂರಾರು ಮಂದಿ ಬಂದಿದ್ದರು. ಹಲವರು ಫೋಟೊ ಕ್ಲಿಕ್ಕಿಸಿಕೊಂಡು, ವಿಡಿಯೊ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT