ಉಡುಪಿ: ಗುರು ಎಂಬುದು ಕೇವಲ ವ್ಯಕ್ತಿಯಲ್ಲ, ಅದೊಂದು ತತ್ವ. ಗುರು ತತ್ವವನ್ನು ಉಪೇಕ್ಷಿಸಬಾರದು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಗುರುಪೂರ್ಣಿಮೆ ಅಂಗವಾಗಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಗುರುವಾರ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಗುರು ವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಗುರು ಪರಂಪರೆಗೆ ಗೌರವ ಕೊಡುವುದನ್ನು ಸ್ವತಃ ಶ್ರೀಕೃಷ್ಣನೇ ತಿಳಿಸಿದ್ದಾನೆ. ಆಚಾರ್ಯ ಮಧ್ವರೂ ಸುಧಾ ಮಂಗಳದಲ್ಲಿ ಅದನ್ನು ಪ್ರತಿಪಾದಿಸಿದ್ದಾರೆ ಎಂದರು.
ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಾತನಾಡಿ, ಲೌಕಿಕ ಹಾಗೂ ಆಧ್ಯಾತ್ಮಿಕ ಸಾಧನೆಗೆ ಗುರುಗಳ ಮಾರ್ಗದರ್ಶನ ಅಗತ್ಯ ಎಂದರು.
ಮಂಜುನಾಥೇಶ್ವರ ಭಜನಾ ಪರಿಷತ್ ಕೇಂದ್ರ ಸಮಿತಿಯ ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್, ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಉಡುಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ವಿದುಷಿ ಪರಿಮಳ ವ್ಯಾಸರಾವ್ ಬಳ್ಳಾರಿ, ಮಠದ ಪ್ರಮುಖರಾದ ರಘುಪತಿ ರಾವ್ ಕಿನ್ನಿಮೂಲ್ಕಿ ,ರಮೇಶ ಭಟ್, ನಗರಸಭಾ ಮಾಜಿ ಸದಸ್ಯ ನರಸಿಂಹ ನಾಯಕ್, ಗಾಯತ್ರಿ ಸುರೇಶ್ ಮಂಗಳೂರು, ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.
ಗೋಪಾಲಾಚಾರ್ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಉಭಯ ಶ್ರೀಪಾದರಿಗೆ ಗುರು ವಂದನೆ ಸಲ್ಲಿಸಲಾಯಿತು. ಸುಗುಣಶ್ರೀ ಭಜನಾ ಮಂಡಳಿ ಹಾಗೂ ಇತರ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು.
ಗುರು ಪೂರ್ಣಿಮೆ ಭಜನಾ ಮಹೋತ್ಸವ
ಉಡುಪಿ: ನಗರದ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಗುರುವಾರ ಗುರು ಪೂರ್ಣಿಮೆ ಕಾರ್ಯಕ್ರಮ ಭಜನಾ ಮಹೋತ್ಸವ ಹಾಗೂ ನಿತ್ಯಾನಂದ ಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆಯಿತು. ಭಜನಾ ಮಹೋತ್ಸವಕ್ಕೆ ಸೂರ್ಯ ಪ್ರಕಾಶ್ ಚಾಲನೆ ನೀಡಿದರು. ಕೆ. ದಿವಾಕರ್ ಶೆಟ್ಟಿ ತೋಟದಮನೆ ಉದಯ ಕುಮಾರ್ ಶೆಟ್ಟಿ ಬನ್ನಂಜೆ ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ ತೋನ್ಸೆ ನವೀನ್ ಶೆಟ್ಟಿ ಮೋಹನ್ ಚಂದ್ರ ನಂಬಿಯಾರ್ ತಾರಾನಾಥ್ ಮೇಸ್ತ ಅರ್ಚಕರಾದ ಓಂ ಪ್ರಕಾಶ್ ಅಮಿತ್ ಶುಕ್ಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.