
ಹೆಬ್ರಿ: ಇಲ್ಲಿನ ಅನಂತಪದ್ಮನಾಭ ದೇವಸ್ಥಾನದಿಂದ ಗಿಲ್ಲಾಳಿ ವಿಶ್ವೇಶಕೃಷ್ಣ ಗೋಶಾಲೆಗೆ ಅನಂತಪದ್ಮನಾಭ ಪಾದಯಾತ್ರಾ ಸಮಿತಿ ವತಿಯಿಂದ ಭಾನುವಾರ ವಿಪ್ರ ಬಾಂಧವರಿಂದ ಪಾದಯಾತ್ರೆ ನಡೆಯಿತು.
ಗೋಶಾಲೆಗೆ ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ, ನಾಮ ಸ್ಮರಣೆಯೊಂದಿಗೆ ತೆರಳಿ ಗೋವುಗಳಿಗೆ ಗೋಗ್ರಾಸ ಅರ್ಪಿಸಲಾಯಿತು. ಬೆಳಗುಂಡಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಶಿವ ಸಹಸ್ರನಾಮ ಪಾರಾಯಣದೊಂದಿಗೆ ಬಿಲ್ವಾರ್ಚನೆ ನಡೆಸಿ ಪಾದಯಾತ್ರೆ ಸಮಾಪ್ತಿಗೊಳಿಸಲಾಯಿತು.
ಸುಮಾರು 100ಕ್ಕೂ ಮಿಕ್ಕಿ ವಿಪ್ರರು ಪಾಲ್ಗೊಂಡಿದ್ದರು. ಗಿಲ್ಲಾಳಿ ಗೋಶಾಲೆ ಟ್ರಸ್ಟಿಗಳಾದ ಪದ್ಮನಾಭ ಆಚಾರ್ಯ, ವಿಷ್ಣುಮೂರ್ತಿ ಆಚಾರ್ಯ, ಪಾದಯಾತ್ರಾ ಸಮಿತಿಯ ಬಲ್ಲಾಡಿ ಚಂದ್ರಶೇಖರ ಭಟ್, ಸುದರ್ಶನ್ ಜೋಯಿಸ್, ಸದಸ್ಯರು ಭಾಗವಹಿಸಿದ್ದರು. ಮಡಾಮಕ್ಕಿ ವೇದವ್ಯಾಸ ತಂತ್ರಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.