ADVERTISEMENT

ಮ್ಯಾಟ್ ಕಬಡ್ಡಿ: ಕೆಎಫ್‌ಸಿ ಕನ್ಯಾನ ಪ್ರಥಮ

ಹೆಬ್ರಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸುವರ್ಣ ಸಂಭ್ರಮದ ಪ್ರಯುಕ್ತ ಆಯೋಜನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 4:26 IST
Last Updated 13 ಆಗಸ್ಟ್ 2025, 4:26 IST
ಪ್ರಾಂಶುಪಾಲ ವಿದ್ಯಾಧರ ಹೆಗ್ಡೆ, ಹೆಬ್ರಿ ಪಿಎಸ್‌ಐ ರವಿ ಬಿ.ಕೆ‌. ಕಬಡ್ಡಿ ಟೂರ್ನಿ ಉದ್ಘಾಟಿಸಿದರು
ಪ್ರಾಂಶುಪಾಲ ವಿದ್ಯಾಧರ ಹೆಗ್ಡೆ, ಹೆಬ್ರಿ ಪಿಎಸ್‌ಐ ರವಿ ಬಿ.ಕೆ‌. ಕಬಡ್ಡಿ ಟೂರ್ನಿ ಉದ್ಘಾಟಿಸಿದರು   

ಹೆಬ್ರಿ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸುವರ್ಣ ಸಂಭ್ರಮದ ಪ್ರಯುಕ್ತ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ಪ್ರಥಮ ದರ್ಜೆ ಕಾಲೇಜಿನ ಒಳಾಂಗಣದಲ್ಲಿ ಸೋಮವಾರ ಮುಕ್ತ ಮ್ಯಾಟ್ ಕಬಡ್ಡಿ ಟೂರ್ನಿ ನಡೆಯಿತು.

ಪ್ರಾಂಶುಪಾಲ ವಿದ್ಯಾಧರ ಹೆಗ್ಡೆ, ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ರವಿ ಬಿ.ಕೆ‌. ಉದ್ಘಾಟಿಸಿದರು. ಹೆಬ್ರಿಯಲ್ಲಿ ಮೊದಲ ಬಾರಿ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಬಹುಮಾನದ ಪ್ರಾಯೋಜಕ ಸಂಪತ್ ಶೆಟ್ಟಿ ಕಲ್ಲಿಲ್ಲು ಕ್ರೀಡಾಂಗಣದ ಉದ್ಘಾಟನೆ ನೆರವೇರಿಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಜನಾರ್ಧನ್ ಎಚ್. ಅಧ್ಯಕ್ಷತೆ ವಹಿಸಿದ್ದರು.

ಸಮಿತಿಯ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಕ್ರೀಡಾ ಸಂಚಾಲಕ ಕರುಣಾಕರ ಸೇರಿಗಾರ್, ಒಎಂಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಾಸುದೇವ ಭಟ್, ದೈಹಿಕ ಶಿಕ್ಷಣ ನಿರ್ದೇಶಕ ಮನೋಜ್ ಕುಮಾರ್, ಕ್ರೀಡಾ ಸಂಘಟಕ ಭರತ್ ಮುನಿಯಾಲ್ ಭಾಗವಹಿಸಿದ್ದರು.

ADVERTISEMENT

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 18 ತಂಡಗಳು ಕೂಟದಲ್ಲಿ ಭಾಗವಹಿಸಿದ್ದವು. ಕೆಎಫ್‌ಸಿ ಕನ್ಯಾನ ತಂಡ ವಿನ್ನರ್, ಸಂಪತ್ ಶೆಟ್ಟಿ ಕಲ್ಲಿಲ್ಲು ಪ್ರಾಯೋಜಿತ ಕ್ರೇಜಿಬಾಯ್ಸ್ ‘ಎ’ ಹೆಬ್ರಿ ತಂಡ ರನ್ನರ್ ಅಪ್‌ ಪ್ರಶಸ್ತಿ ಪಡೆದವು. ಅರ್ಧನಾರೀಶ್ವರ ಮುಟ್ಲಪಾಡಿ ತೃತೀಯ, ಕ್ರೇಜಿ ಬಾಯ್ಸ್ ‘ಸಿ’ ತಂಡ ಚತುರ್ಥ ಬಹುಮಾನ ಗಳಿಸಿದವು.

ಸಮಾರೋಪ ಸಮಾರಂಭ: ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ದಿನೇಶ್ ಪುತ್ರನ್, ಕಾರ್ಯದರ್ಶಿ ಪ್ರಾಣೇಶ್ ಎಸ್.ಕೆ, ತಾಲ್ಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷ ಪ್ರವೀಣ್ ಬಲ್ಲಾಳ್, ಅಧ್ಯಕ್ಷ ಹರ್ಷ ಶೆಟ್ಟಿ ಬೇಳಂಜೆ, ಉದ್ಯಮಿ ವಾದಿರಾಜ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ್ ಎಚ್, ಉಪಾಧ್ಯಕ್ಷ ದಿವಾಕರ ಶೆಟ್ಟಿ, ಗಣೇಶೋತ್ಸವ ಉಪ ಸಮಿತಿಗಳ ಸಂಚಾಲಕರಾದ ವಸಂತ ಶೆಟ್ಟಿ ನಡುಬೀಡು, ಅರುಣ್ ಹೆಗ್ಡೆ, ಪ್ರಕಾಶ ಶೆಟ್ಟಿ ಕಲ್ಲಿಲ್ಲು, ಟಿ.ಜಿ.ಆಚಾರ್ಯ, ಪ್ರವೀಣ್ ಕುಮಾರ್, ಸುದೀಪ್ ಭಟ್, ಜೊತೆ ಕಾರ್ಯದರ್ಶಿ ಶಂಕರ ಸೇರಿಗಾರ್, ಸಂತೋಷ್ ನಾಯಕ್ ಭಾಗವಹಿಸಿದ್ದರು. ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹೆಬ್ರಿ ಸಂಚಾಲಕ ಸೀತಾನದಿ ವಿಠಲ ಶೆಟ್ಟಿ ಸ್ವಾಗತಿಸಿದರು. ವೇದಿಕೆ ಸಮಿತಿಯ ಸಂಚಾಲಕ ಪ್ರಸಾದ್ ಶೆಟ್ಟಿ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.