
ಹೆಬ್ರಿ: ಗಣರಾಜ್ಯೋತ್ಸವ ದೇಶ ಭಕ್ತಿಯ ಸಂಕೇತ. ಈ ಬಲವಾದ ಭಾವನೆ ಇಟ್ಟುಕೊಂಡು ಸಂವಿಧಾನದಲ್ಲಿ ರೂಪಿಸಿದ ಆಶಯಗಳನ್ನು ಈಡೇರಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳೋಣ. ರಾಷ್ಟ್ರ ಮೊದಲು ಎಂಬ ಮನೋಭಾವದಿಂದ ಒಟ್ಟಾಗಿ ಕೆಲಸ ಮಾಡೋಣ ಎಂದು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು.
ಮುದ್ರಾಡಿ ಎಂ.ಎನ್.ಎಸ್.ಡಿ.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ 77ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೊಹಣ ನೆರವೇರಿಸಿ ಅವರು ಮಾತನಾಡಿದರು.
ಹಿರಿಯ ವಿದ್ಯಾರ್ಥಿನಿ ಕೀರ್ತಿ ಶೆಟ್ಟಿಗಾರ್ ಬಲ್ಲಾಡಿ ಮಾತನಾಡಿ, ನಮ್ಮ ಹಕ್ಕು, ಕರ್ತವ್ಯಗಳನ್ನು ತಿಳಿದುಕೊಂಡು, ಸಮಾನತೆ, ಭಾತೃತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ ಸಂವಿಧಾನವನ್ನು ಗೌರವಿಸೋಣ ಎಂದರು.
ಅಲಯನ್ಸ್ ಕ್ಲಬ್ ಕಾರ್ಯದರ್ಶಿ ಬಾಲಚಂದ್ರ ಎಂ, ಲೇಡೀಸ್ ಅಲಯನ್ಸ್ ಕ್ಲಬ್ ಅಧ್ಯಕ್ಷೆ ಸುನೀತಾ ಹೆಬ್ಬಾರ್, ಅಲಯನ್ಸ್ ಸದಸ್ಯ ಕರುಣಾಕರ ಶೆಟ್ಟಿ ಅವರು ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು. ಶಾಲಾ ಹಿತೈಷಿಗಳಾದ ಪದ್ಮಾವತಿ ಶೆಟ್ಟಿಗಾರ್, ಪ್ರಕಾಶ ಶೆಟ್ಟಿಗಾರ್, ಶಿಕ್ಷಕರಾದ ಶ್ಯಾಮಲಾ, ಚಂದ್ರಕಾಂತಿ ಹೆಗ್ಡೆ, ಸಿಬ್ಬಂದಿ ಮಹೇಶ್, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಸ್ವಾಗತಿಸಿದರು. ಶಿಕ್ಷಕರಾದ ಪಿ.ವಿ. ಆನಂದ ಸಾಲಿಗ್ರಾಮ ವಂದಿಸಿದರು. ಮಹೇಶ ನಾಯ್ಕ್ ಕೆ. ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.