ADVERTISEMENT

ಹೆಬ್ರಿ: ಚುಟುಕು ಸಾಹಿತ್ಯ ರಚನೆ, ವಿದ್ಯಾರ್ಥಿ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 12:45 IST
Last Updated 11 ಏಪ್ರಿಲ್ 2025, 12:45 IST
ಹೆಬ್ರಿಯ ಚಾರ‌ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ‌ಯಲ್ಲಿ  ಚುಟುಕು ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಚುಟುಕು ಸಾಹಿತ್ಯ ರಚನಾ ಕಮ್ಮಟ ನಡೆಯಿತು 
ಹೆಬ್ರಿಯ ಚಾರ‌ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ‌ಯಲ್ಲಿ  ಚುಟುಕು ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಚುಟುಕು ಸಾಹಿತ್ಯ ರಚನಾ ಕಮ್ಮಟ ನಡೆಯಿತು     

ಹೆಬ್ರಿ: ಇಲ್ಲಿನ ಚಾರ‌ ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ‌ಯಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ  ಚುಟುಕು ಸಾಹಿತ್ಯ ರಚನಾ ಕಮ್ಮಟ ನಡೆಯಿತು.

ಚುಟುಕು ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಹಾಗೂ ವಚನ ಸಾಹಿತ್ಯದ ಬೆಳವಣಿಗೆ ಬಗ್ಗೆ ಅವರು ಮಾತನಾಡಿದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು. ಚುಟುಕು ಕವಿ ಪ್ರೀತಿ ಬಿರಾದರ್‌ ಚುಟುಕು ರಚನೆಯ ತರಬೇತಿ ನೀಡಿದರು. 56 ವಿದ್ಯಾರ್ಥಿಗಳು ಚುಟುಕು ರಚನಾ ಕಮ್ಮಟದಲ್ಲಿ ಭಾಗವಹಿಸಿದ್ದರು. ಕಾರ್ಯದರ್ಶಿ ಪ್ರೇಮಾ ಪಾಟೀಲ್, ಮುಖ್ಯ ಶಿಕ್ಷಕಿ ಉಮಾ ಶಂಕರ್ ಭಾಗವಹಿಸಿದ್ದರು. ವಸಂತಿ, ದೀಪಾ ನಿರೂಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.