ADVERTISEMENT

ಜೆಡಿಎಸ್‌ ಪಂಚರತ್ನ ಪ್ರಚಾರ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 4:58 IST
Last Updated 28 ನವೆಂಬರ್ 2022, 4:58 IST
ಹೆಬ್ರಿ ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಭಾನುವಾರ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿರುವ ಜೆಡಿಎಸ್‌ ಪಕ್ಷದ ಪಂಚರತ್ನ ಯೋಜನೆಗಳ ಪ್ರಚಾರ ರಥಕ್ಕೆ ಜೆಡಿಎಸ್‌ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ ವಿ.ಶೆಟ್ಟಿ ಚಾಲನೆ ನೀಡಿದರು. ಜೆಡಿಎಸ್‌ ಯುವ ನಾಯಕ ಕುಚ್ಚೂರು ಶ್ರೀಕಾಂತ್‌ ಪೂಜಾರಿ, ವಾಸುದೇವ ರಾವ್‌ ಸಹಿತ ಮುಖಂಡರು ಭಾಗವಹಿಸಿದ್ದರು

ಹೆಬ್ರಿ: ವಿಧಾನಸಭೆ ಚುನಾವಣೆಗೆ ಯುವ ಕುಚ್ಚೂರು ಶ್ರೀಕಾಂತ್‌ ಪೂಜಾರಿ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾಗಲಿದ್ದಾರೆ ಎಂದು ಜೆಡಿಎಸ್‌ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ ವಿ.ಶೆಟ್ಟಿ ತಿಳಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿರುವ ಜೆಡಿಎಸ್‌ ಪಂಚರತ್ನ ಯೋಜನೆಗಳ ಪ್ರಚಾರ ರಥಕ್ಕೆ ಹೆಬ್ರಿಯ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಾಲನೆ ನೀಡಿದ ಸಂದರ್ಭದಲ್ಲಿಅವರು ಮಾತನಾಡಿದರು.

ಕುಮಾರಸ್ವಾಮಿ ಅವರು ಜನಸಾಮಾನ್ಯರ ಮುಖ್ಯ ಮಂತ್ರಿಯಾಗಿದ್ದರು. ಜೆಡಿಎಸ್‌ ಬೆಂಬಲಿಸಿ ಸರ್ಕಾರದ ಮೂಲಕ ಶಕ್ತಿ ವೃದ್ಧಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ADVERTISEMENT

ಕುಚ್ಚೂರು ಶ್ರೀಕಾಂತ್‌ ಪೂಜಾರಿ ಮಾತನಾಡಿದರು. ಹೆಬ್ರಿ ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಅರ್ಚಕ ಮೋಹನರಾಜ ಜೋಯಿಸ್‌ ಪ್ರಚಾರ ರಥಕ್ಕೆ ಪೂಜೆ ನೆರವೇರಿಸಿದರು. ಜೆಡಿಎಸ್‌ ಉಡುಪಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವಾಸುದೇವ ರಾವ್‌, ಮುಖಂಡ ಪ್ರವೀಣ್‌ ಚಂದ್ರ ಜೈನ್‌, ಜಯರಾಮ ಆಚಾರ್ಯ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ್‌ ಕುಂದಾಪುರ, ಯುವ ಜನತಾದಳ ಅಧ್ಯಕ್ಷ ಸಂಜಯ್‌, ಪ್ರಮುಖರಾದ ಸುರೇಶ್‌ ದೇವಾಡಿಗ ಬಜಗೋಳಿ, ಹರೀಶ್‌ ಮುದ್ರಾಡಿ, ರಜಾಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.