ADVERTISEMENT

ಮಲ್ಪೆಯಲ್ಲಿ ಹಿಜಾಬ್ ಪರ ಬರಹ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 15:45 IST
Last Updated 17 ಮಾರ್ಚ್ 2022, 15:45 IST
ಮಲ್ಪೆಯ ವಡಬಾಂಡೇಶ್ವರದಲ್ಲಿರುವ ಮನೆಯ ಕಂಪೌಂಡ್‌ ಗೋಡೆಯ ಮೇಲೆ ಹಿಜಾಬ್ ಪರ ಬರಹ ಬರೆಯಲಾಗಿದೆ.
ಮಲ್ಪೆಯ ವಡಬಾಂಡೇಶ್ವರದಲ್ಲಿರುವ ಮನೆಯ ಕಂಪೌಂಡ್‌ ಗೋಡೆಯ ಮೇಲೆ ಹಿಜಾಬ್ ಪರ ಬರಹ ಬರೆಯಲಾಗಿದೆ.   

ಉಡುಪಿ: ಮಲ್ಪೆಯ ವಡಬಾಂಡೇಶ್ವರದಲ್ಲಿರುವ ಮನೆಯ ಕಂಪೌಂಡ್‌ ಗೋಡೆಯ ಮೇಲೆ ಹಿಜಾಬ್ ಪರ ಬರಹ ಬರೆಯಲಾಗಿದೆ.

‘ಹಿಜಾಬ್ ಮೂವ್‌ಮೆಂಟ್‌, ಹಿಜಾಬ್ ಇಸ್ ರೈಟ್‌, ಹಿಜಾಬ್ ಇಸ್‌ ಡಿಗ್ನಿಟಿ’ ಎಂಬ ಸಾಲುಗಳನ್ನು ಬರೆಯಲಾಗಿದೆ. ಮನೆಯ ಮಾಲೀಕರು ಬೇರೆಡೆ ವಾಸವಾಗಿದ್ದು, ಮನೆಯಲ್ಲಿ ಯಾರೂ ಇಲ್ಲ. ತನಿಖೆ ನಡೆಯುತ್ತಿದೆ ಎಂದು ಮಲ್ಪೆ ಠಾಣೆ ಪಿಎಸ್‌ಐ ಶಕ್ತಿವೇಲು ಮಾಹಿತಿ ನೀಡಿದರು.

ಸುದ್ದಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹಿಜಾಬ್ ಪರ ಗೋಡೆ ಬರಹ ಬರೆದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.