ADVERTISEMENT

ರಂಗಭೂಮಿಗೆ ಸದಾನಂದ ಸುವರ್ಣರ ಕೊಡುಗೆ ಅನನ್ಯ: ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 7:12 IST
Last Updated 27 ಜುಲೈ 2024, 7:12 IST
<div class="paragraphs"><p>ರಂಗ ದಿಗ್ಗಜ್ಜ ಸದಾನಂದ ಸುವರ್ಣರಿಗೆ ನಮನ ಮತ್ತು ಆಷಾಢದಲೊಂದು ಉಪನ್ಯಾಸ ಕಾರ್ಯಕ್ರಮ ಜರುಗಿತು</p></div>

ರಂಗ ದಿಗ್ಗಜ್ಜ ಸದಾನಂದ ಸುವರ್ಣರಿಗೆ ನಮನ ಮತ್ತು ಆಷಾಢದಲೊಂದು ಉಪನ್ಯಾಸ ಕಾರ್ಯಕ್ರಮ ಜರುಗಿತು

   

ಉಡುಪಿ: ಭಾರತೀಯ ಸಮಕಾಲೀನ ರಂಗಭೂಮಿ ಇತಿಹಾಸದಲ್ಲಿ ಸದಾನಂದ ಸುವರ್ಣರು ಪ್ರತಿನಾಯಕನಾಗಿ ನಿಲ್ಲುತ್ತಾರೆ. ಅದನ್ನು ಅರ್ಥಮಾಡಿಕೊಳ್ಳಲು ಅವರ ಕೋರ್ಟ್‌ ಮಾರ್ಶನ್‌ ನಾಟಕವೇ ಸಾಕ್ಷಿ ಎಂದು ರಂಗನಿರ್ದೇಶಕ ಪ್ರಸನ್ನ ಹೇಳಿದರು.

ಉಡುಪಿ ರಂಗಭೂಮಿ ಹಾಗೂ ಉಡುಪಿಯ ವಿವಿಧ ರಂಗ ತಂಡಗಳ ಸಹಭಾಗಿತ್ವದಲ್ಲಿ ನಗರದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಂಗ ದಿಗ್ಗಜ ಸದಾನಂದ ಸುವರ್ಣರಿಗೆ ನಮನ ಮತ್ತು ಆಷಾಢದಲೊಂದು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಸದಾನಂದ ಸುವರ್ಣರು ಮುಂಬೈನ ಜೆ.ಜೆ. ಸ್ಕೂಲ್‌ ಆಫ್‌ ಆರ್ಟ್ಸ್‌ ಮೂಲಕ ರಂಗಭೂಮಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು. ಸಮಕಾಲೀನ ರಂಗನಟನೆಯಲ್ಲಿ ಭಾರತೀಯ ಪರಂಪರೆಯನ್ನು ರೂಪಿಸಿದವರಲ್ಲಿ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರು.

ಇಂದು ಯಾವ ರಾಜಕಾರಣಿಗಳು ಕೂಡ ನಾಟಕವನ್ನು ನೋಡುವುದಿಲ್ಲ. ಈ ಅದ್ಭುತ ಕ್ಷೇತ್ರವನ್ನು ಅವರೆಲ್ಲ ಕಡೆಗಣಿಸುತ್ತಿದ್ದಾರೆ. ರಾಜಕಾರಣಿಗಳನ್ನು ನಾವು ಮೂರ್ಖರ ರೀತಿಯಲ್ಲಿ ನಂಬಿ ಜಗಳ ಆಡುತ್ತಿದ್ದೇವೆ. ಈ ದುರಂತ ಸ್ಥಿತಿಗೆ ಭಾರತ ದೇಶ ಬಂದು ಬಿದ್ದಿದೆ ಎಂದು ಹೇಳಿದರು.

ಸಾಕ್ಷ್ಯಚಿತ್ರ ನಿರ್ದೇಶಕ ನಟೇಶ್ ಉಲ್ಲಾಳ್ ನುಡಿನಮನ ಸಲ್ಲಿಸಿದರು. ರಂಗಕರ್ಮಿ ಕೆ.ಎಂ.ರಾಘವ ನಂಬಿಯಾರ್ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಸುಧಾ ಅಡುಕಳ ಮಾತನಾಡಿದರು.

ಉದ್ಯಾವರ ನಾಗೇಶ್ ಕುಮಾರ್, ಮುರಳಿ ಕಡೆಕಾರ್, ಭಾಸ್ಕರ ರಾವ್ ಕಿದಿಯೂರು, ಸಂತೋಷ್ ಕುಮಾರ್ ಪಟ್ಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.