ಬ್ರಹ್ಮಾವರ: ವಿದ್ಯಾಲಯ, ದೇವಾಲಯ ಊರಿನ ಎರಡು ಕಣ್ಣುಗಳಿದ್ದಂತೆ. ಮೂಲ ಸೌಕರ್ಯಗಳಲ್ಲಿ ಶೌಚಾಲಯ ಬಹಳ ಮುಖ್ಯ. ಶೌಚಾಲಯ ಬಳಸಿದರೆ ಸಾಲದು. ಅದರ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದು ಮಂಗಳೂರು ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥ ಹರೀಶ ರಾವ್ ಹೇಳಿದರು.
ಬ್ರಹ್ಮಾವರ ತಾಲ್ಲೂಕಿನ ಆರೂರು ಮಹತೋಭಾರ ವಿಷ್ಣುಮೂರ್ತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಂಗಳೂರಿನ ಎಂ.ಆರ್.ಪಿ.ಎಲ್‌ನ
ಸಿ.ಎಸ್.ಆರ್ ನಿಧಿಯಿಂದ ₹10.3ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶೌಚಾಲಯ ಕಟ್ಟಡದ ಉದ್ಘಾಟನೆ ಮತ್ತು ₹2.4ಲಕ್ಷ ಮೌಲ್ಯದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೂರು ಪಂಚಾಯಿತಿ ಅಧ್ಯಕ್ಷ ಗುರುರಾಜ ರಾವ್, ಸದಸ್ಯರಾದ ಮಮತಾ ಸಂತೋಷ ಶೆಟ್ಟಿ, ಚಂದ್ರಾವತಿ ಹೆಬ್ಬಾರ್, ಉದಯ ನಾಯ್ಕ, ಶಾಲಾ ಸಂಚಾಲಕ ಎ.ಎಂ. ಮೋಹನ ರಾವ್, ನಿವೃತ್ತ ಮುಖ್ಯ ಶಿಕ್ಷಕರಾದ ಸಂದೀಪ್ ಕುಮಾರ್ ಹೆಗ್ಡೆ, ಎ.ಎಂ.ಪದ್ಮನಾಭ ರಾವ್, ಆರೂರ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎ.ರತ್ನಾಕರ ಭಟ್, ವ್ಯವಸ್ಥಾಪನಾ ಸಮಿತಿಯ ಸದಸ್ಯ ಈಶ್ವರ ಸೇರಿಗಾರ್, ಎಂ.ಆರ್.ಪಿ.ಎಲ್‌ನ ಉದ್ಯೋಗಿ ಯಾದವ ಸೇರಿಗಾರ್ ಹಾಗೂ ಶಾಲಾ ಶಿಕ್ಷಕಿಯರಾದ ಸುಪ್ರೀತಾ, ಶಕುಂತಲಾ, ದೀಕ್ಷೀತಾ ಇದ್ದರು. ಶಾಲಾ ಮುಖ್ಯ ಶಿಕ್ಷಕ ಸತೀಶ ಶೆಟ್ಟಿ ಸ್ವಾಗತಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.