ADVERTISEMENT

ಕೆಟ್ಟುನಿಂತ ವಿದ್ಯುತ್ ದೀಪ ಸರಿಪಡಿಸಲು ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 16:23 IST
Last Updated 17 ಸೆಪ್ಟೆಂಬರ್ 2019, 16:23 IST
ನಗರದ ಕುಕ್ಕಿಕಟ್ಟೆ ಬಳಿಯ ಹೈಮಾಸ್ಟ್‌ ವಿದ್ಯುತ್ ದೀಪ ದುರಸ್ತಿಗೆ ಒತ್ತಾಯಿಸಿ ಅಲ್ಲಿನ ನಾಗರಿಕರು ಸೋಮವಾರ ರಾತ್ರಿ ವಿದ್ಯುತ್ ಕಂಬಕ್ಕ ಗ್ಯಾಸ್‌ ಲೈಟ್‌ ಕಟ್ಟಿ ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಕುಕ್ಕಿಕಟ್ಟೆ ಬಳಿಯ ಹೈಮಾಸ್ಟ್‌ ವಿದ್ಯುತ್ ದೀಪ ದುರಸ್ತಿಗೆ ಒತ್ತಾಯಿಸಿ ಅಲ್ಲಿನ ನಾಗರಿಕರು ಸೋಮವಾರ ರಾತ್ರಿ ವಿದ್ಯುತ್ ಕಂಬಕ್ಕ ಗ್ಯಾಸ್‌ ಲೈಟ್‌ ಕಟ್ಟಿ ವಿನೂತನ ಪ್ರತಿಭಟನೆ ನಡೆಸಿದರು.   

ಉಡುಪಿ: ನಗರದ ಕುಕ್ಕಿಕಟ್ಟೆ ಬಳಿಯ ಹೈಮಾಸ್ಟ್‌ ವಿದ್ಯುತ್ ದೀಪ ಕೆಟ್ಟುನಿಂತು ದುರಸ್ತಿ ಮಾಡುವಂತೆ ನಗರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಲ್ಲಿನ ನಾಗರಿಕರು ಸೋಮವಾರ ರಾತ್ರಿ ವಿದ್ಯುತ್ ಕಂಬಕ್ಕ ಗ್ಯಾಸ್‌ ಲೈಟ್‌ ಕಟ್ಟಿ ವಿನೂತನ ಪ್ರತಿಭಟನೆ ನಡೆಸಿದರು.

ಗ್ಯಾಸ್‌ ಲೈಟ್‌ ಕಟ್ಟಿ ಅದರ ಕೆಳಗೆ ‘ಸಾರ್ವಜನಿಕರ ಅನುಕೂಲಕ್ಕಾಗಿ ಗ್ಯಾಸ್ ದೀಪದ ವ್ಯವಸ್ಥೆ ಮಾಡಲಾಗಿದೆ, ದಯವಿಟ್ಟು ಸಹಕರಿಸಿ’ ಎಂಬ ಬೋರ್ಡ್‌ ಬರೆಸಿ ತೂಗು ಹಾಕಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಮಂಗಳವಾರ ನಗರಸಭೆ ಅಧಿಕಾರಿಗಳು ಹೈಮಾಸ್ಟ್ ದೀಪವನ್ನು ದುರಸ್ತಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT