ADVERTISEMENT

ಕಾಂಗ್ರೆಸ್‌ನಿಂದ ಕರಾವಳಿ ಸಮಗ್ರ ಅಭಿವೃದ್ಧಿ: ಸೊರಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 16:19 IST
Last Updated 23 ಜನವರಿ 2023, 16:19 IST
ವಿನಯಕುಮಾರ್ ಸೊರಕೆ
ವಿನಯಕುಮಾರ್ ಸೊರಕೆ   

ಉಡುಪಿ: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಪ್ರತಿ ವರ್ಷ 2500 ಕೋಟಿ ಅನುದಾನ ನೀಡಲು ನಿರ್ಧರಿಸಿದೆ. ಕರಾವಳಿಯನ್ನು ಐಟಿ ಹಾಗೂ ಗಾರ್ಮೆಂಟ್ಸ್‌ ಹಬ್‌ ಆಗಿ ರೂಪಿಸಿ ಒಂದು ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು.

ಮೀನುಗಾರರಿಗೆ ವಿಮೆ, ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತ ಸಾಲ, ಸೀಮೆಎಣ್ಣೆ, ಡೀಸೆಲ್ ಸಬ್ಸಿಡಿ ಹಾಗೂ ಪ್ರಮಾಣ ಹೆಚ್ಚಳ, ಗಂಗೊಳ್ಳಿ, ಮಂಗಳೂರು ಬಂದರುಗಳ ಹೂಳೆತ್ತಲು ಕ್ರಮ, ನಾರಾಯಣ ಗುರು ಹಾಗೂ ಬಂಟರ ಅಭಿವೃದ್ಧಿ ಮಂಡಳಿಗೆ ಸ್ಥಾಪಿಸಿ 5 ವರ್ಷಕ್ಕೆ 1250 ಕೋಟಿ ಮೀಸಲು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುವುದು.

ADVERTISEMENT

ವಿಶೇಷವಾಗಿ ಕರಾವಳಿಯಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಕರಾವಳಿ ಕೋಮು ಸೌಹಾರ್ದ ಕೇಂದ್ರವನ್ನು ಸ್ಥಾಪಿಸಿ ಸರ್ವ ಧರ್ಮದವರು ಸಹಬಾಳ್ವೆ ನಡೆಸಲು ಅನುಕೂಲವಾಗುವಂತಹ ವಾತಾವರಣ ನಿರ್ಮಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಕ್ತಾರರಾದ ಭಾಸ್ಕರ ರಾವ್ ಕಿದಿಯೂರು, ಜಿಲ್ಲಾ ಉಪಾಧ್ಷಕ್ಷ ಪ್ರಖ್ಯಾತ ಶೆಟ್ಟಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್, ಜಿಲ್ಲಾ ಕಾರ್ಯದರ್ಶಿ ಕೀರ್ತಿ ಶೆಟ್ಟಿ, ಪ್ರಶಾಂತ ಜತ್ತನ್ನ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.