ADVERTISEMENT

ಪಡುಬಿದ್ರಿ | ಜನ ಸುರಕ್ಷಾ ನೋಂದಣಿ ಅಭಿಯಾನ

ಪ್ರತಿಯೊಬ್ಬರಿಗೂ ವಿಮಾ ಯೋಜನೆ ಲಾಭ ದೊರಕಿಸುವುದು ಕೇಂದ್ರ ಸರ್ಕಾರದ ಪರಿಕಲ್ಪನೆ: ಸೋನಾಲಿ ಸೇನ್‌ಗುಪ್ತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:25 IST
Last Updated 13 ಸೆಪ್ಟೆಂಬರ್ 2025, 6:25 IST
ಬೆಳಪು ಗ್ರಾಮ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರ ಪ್ರಾಯೋಜಿತ ಮಹಿಳಾ ಗ್ರಾಹಕರ ಜಾಗೃತಿ ಶಿಬಿರ, ಗ್ರಾಮ ಪಂಚಾಯಿತಿ ಮಟ್ಟದ ಜನಸುರಕ್ಷಾ ನೋಂದಣಿ ಅಭಿಯಾನ ಉದ್ಘಾಟಿಸಿದ ಆರ್‌ಬಿಐ ಬೆಂಗಳೂರು ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೇನ್‌ಗುಪ್ತಾ ಫಲಾನುಭವಿಗಳಿಗೆ ಚೆಕ್ ವಿತರಿಸಿದರು
ಬೆಳಪು ಗ್ರಾಮ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರ ಪ್ರಾಯೋಜಿತ ಮಹಿಳಾ ಗ್ರಾಹಕರ ಜಾಗೃತಿ ಶಿಬಿರ, ಗ್ರಾಮ ಪಂಚಾಯಿತಿ ಮಟ್ಟದ ಜನಸುರಕ್ಷಾ ನೋಂದಣಿ ಅಭಿಯಾನ ಉದ್ಘಾಟಿಸಿದ ಆರ್‌ಬಿಐ ಬೆಂಗಳೂರು ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೇನ್‌ಗುಪ್ತಾ ಫಲಾನುಭವಿಗಳಿಗೆ ಚೆಕ್ ವಿತರಿಸಿದರು   

ಪಡುಬಿದ್ರಿ: ‘ವಿಮಾ ಯೋಜನೆಯ ಲಾಭ ದೇಶದ ಪ್ರತಿ ಪ್ರಜೆಗೂ ಸಿಗಬೇಕು ಎನ್ನುವುದು ಕೇಂದ್ರ ಸರ್ಕಾರದ ಆಶಯ ಮತ್ತು ಪರಿಕಲ್ಪನೆ’ ಎಂದು ಆರ್‌ಬಿಐ ಬೆಂಗಳೂರು ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೇನ್‌ಗುಪ್ತಾ ಹೇಳಿದರು.

ಬೆಳಪು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಕೇಂದ್ರ ಸರ್ಕಾರ ಪ್ರಾಯೋಜಿತ ಮಹಿಳಾ ಗ್ರಾಹಕರ ಜಾಗೃತಿ ಶಿಬಿರ, ಗ್ರಾಮ ಪಂಚಾಯಿತಿ ಮಟ್ಟದ ಜನ ಸುರಕ್ಷಾ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಜನ್‌ಧನ್ ಖಾತೆ ಮರುನೋಂದಣಿಯನ್ನೂ ಆರಂಭಿಸಲಾಗಿದೆ. ಈ ಯೋಜನೆ ಸೆ. 30ರವರೆಗೆ ಮುಂದುವರಿಯಲಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ಬೆಳಪು ಗ್ರಾಮ ಪಂಚಾಯಿತಿಯ ಅಮೂಲಾಗ್ರ ಅಭಿವೃದ್ಧಿಯ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಗ್ರಾಮ ದೇಶಕ್ಕೆ ಮಾದರಿಯಾಗಿದ್ದು, ಹಾಗಾಗಿ ಇಲ್ಲಿ ಅಭಿಯಾನ ನಡೆಸಲಾಗಿದೆ ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರದ ಬ್ಯಾಂಕಿಂಗ್ ಯೋಜನೆಗಳನ್ನು ಜನರಿಗೆ ತಲುಪಿಸಲು ದೇಶದ ಎಲ್ಲಾ ಗ್ರಾಮಗಳಿಗೆ ತೆರಳಿ ಬ್ಯಾಂಕ್‌ಗಳು ಅಭಿಯಾನ ನಡೆಸುತ್ತಿವೆ. ಮೂರು ತಿಂಗಳ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನದಲ್ಲಿ ಗ್ರಾಮೀಣ ಜನರ ಸಹಿತ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅವಶ್ಯಕ ಎಂದು ಹೇಳಿದರು.

ಕಮಿಷನ್ ಪಡೆದು ಸಾಲ ದೊರಕಿಸಿಕೊಡುವ ಯಾವುದೇ ವ್ಯವಸ್ಥೆಗೆ ಅವಕಾಶವಿಲ್ಲ. ಅಂತಹ ವ್ಯಕ‌್ತಿಗಳ ಬಗ್ಗೆ ದೂರು ನೀಡಿದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು. ‘ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಾಲ ನೀಡಲು ಬ್ಯಾಂಕ್‌ಗಳು ಏಜೆಂಟರ್‌ಗಳನ್ನು ನೇಮಿಸುತ್ತಿವೆ. ಕಲೆಕ್ಷನ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ಬೆಳಪು ದೇವಿಪ್ರಸಾದ್ ಶೆಟ್ಟಿ, ಸದಸ್ಯೆ ಸೌಮ್ಯಾ ಸುರೇಂದ್ರ ದೂರಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬ್ಯಾಂಕಿಂಗ್ ಯೋಜನೆಗಳ ಬಗ್ಗೆ ಗ್ರಾಮೀಣ ಜನರಿಗೆ ಸೂಕ್ತ ಮಾಹಿತಿ ಇಲ್ಲ. ಶೈಕ್ಷಣಿಕ ಸಾಲಕ್ಕೆ ಹೆಚ್ಚು ತೊಂದರೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಅವರನ್ನು ಬೆಳಪು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಪ್ರಕೃತಿ ವಿಕೋಪ ನಿಧಿಯಿಂದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಕೇಂದ್ರ ಸರ್ಕಾರದ ₹20ರ ವಿಮಾ ಯೋಜನೆಯ ಫಲಾನುಭವಿಗೆ ₹2 ಲಕ್ಷದ ಚೆಕ್‌ ಅನ್ನು ಬ್ಯಾಂಕ್ ವತಿಯಿಂದ ವಿತರಿಸಲಾಯಿತು.

ಯೂನಿಯನ್ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾರ್, ಯೂನಿಯನ್ ಬ್ಯಾಂಕ್ ರೀಜನಲ್ ಹೆಡ್ ಅಶೋಕ್ ಅಂಬಸ ಭಂಡಾಜೆ, ಲೀಡ್ ಬ್ಯಾಂಕ್ ಪ್ರಬಂಧಕ ಹರೀಶ್ ಜಿ., ಕೆನರಾ ಬ್ಯಾಂಕ್ ಡಿಜಿಎಂ ಪ್ರಬಿತ್ರ ಕುಮಾರ್ ದಾಸ್, ಕಾರ್ಫೋರೇಟ್ ಬಿಸಿ ರೀಜನಲ್ ಹೆಡ್ ಚೈತನ್ಯ ಕೃಷ್ಣ, ಬೆಳಪು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಭಟ್, ಪಿಡಿಒ ಪ್ರವೀಣ್ ಡಿಸೋಜ ಭಾಗವಹಿಸಿದ್ದರು. ಯೂನಿಯನ್ ಬ್ಯಾಂಕ್ ಶಾಖಾ ಪ್ರಬಂಧಕ ಅಶೋಕ್ ಕೋಟ್ಯಾನ್ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.