ADVERTISEMENT

‘ಯಕ್ಷಗಾನ ಕಲಾರಂಗದ ವಿಶ್ವಾಸಾರ್ಹತೆ ಪ್ರಶ್ನಾತೀತ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 17:09 IST
Last Updated 16 ಜುಲೈ 2021, 17:09 IST
ಉಡುಪಿಯ ಯಕ್ಷಗಾನ ಕಲಾರಂಗದಿಂದ ಆಯ್ದ ಮೇಳಗಳ 409 ಕಲಾವಿದರಿಗೆ ಶುಕ್ರವಾರ ₹10,22,500 ಆರ್ಥಿಕ ನೆರವನ್ನು ಸಂಸ್ಥೆಯ ಕಚೇರಿಯಲ್ಲಿ ವಿತರಿಸಲಾಯಿತು.
ಉಡುಪಿಯ ಯಕ್ಷಗಾನ ಕಲಾರಂಗದಿಂದ ಆಯ್ದ ಮೇಳಗಳ 409 ಕಲಾವಿದರಿಗೆ ಶುಕ್ರವಾರ ₹10,22,500 ಆರ್ಥಿಕ ನೆರವನ್ನು ಸಂಸ್ಥೆಯ ಕಚೇರಿಯಲ್ಲಿ ವಿತರಿಸಲಾಯಿತು.   

ಉಡುಪಿ: ಯಕ್ಷಗಾನ ಕಲಾರಂಗದಿಂದ ಆಯ್ದ ಮೇಳಗಳ 409 ಕಲಾವಿದರಿಗೆ ಶುಕ್ರವಾರ ₹10,22,500 ಆರ್ಥಿಕ ನೆರವನ್ನು ಸಂಸ್ಥೆಯ ಕಚೇರಿಯಲ್ಲಿ ವಿತರಿಸಲಾಯಿತು.

ಶಾಸಕರಾದ ಕೆ. ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ಕಲಾರಂಗ ಸಮಾಜದ ವಿಶ್ವಾಸಾರ್ಹತೆಯನ್ನು ಸಂಪಾದಿಸಿದ್ದು, ಸಂಸ್ಥೆಯ ಚಟುವಟಿಕೆಯೊಂದಿಗೆ ಸದಾ ಕೈ ಜೋಡಿಸುತ್ತೇನೆ ಎಂದರು.

ಪಣಂಬೂರು ವಾಸುದೇವ ಐತಾಳರು ಮಾತನಾಡಿ, ಸಂಸ್ಥೆ ಬಹುಮುಖಿಯಾಗಿ ಕೆಲಸ ಮಾಡುತ್ತಿದ್ದು, 20 ವರ್ಷಗಳಿಂದ ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ನೋಡಿ ಬೆರಗಾಗಿದ್ದೇನೆ ಎಂದರು.

ADVERTISEMENT

ಸಾಂಕೇತಿಕವಾಗಿ ಸಾಲಿಗ್ರಾಮ ಮೇಳದ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿ, ಬಪ್ಪನಾಡು ಮೇಳದ ಭಾಗವತ ಗಣೇಶ್ ಕುಮಾರ್ ಹೆಬ್ರಿ, ಯಕ್ಷಶಿಕ್ಷಣದ ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿಯವರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.

ಉಳಿದ ಕಲಾವಿದರ ಬ್ಯಾಂಕ್‌ ಖಾತೆಗೆ ತಲಾ ₹ 2,500 ವರ್ಗಾವಣೆ ಮಾಡಲಾಯಿತು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಮನೋಹರ್ ಅತಿಥಿಗಳನ್ನು ಗೌರವಿಸಿದರು.

ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ದಾನಿಗಳ ಪ್ರೋತ್ಸಾಹ ಹಾಗೂ ಯೋಜನೆಗೆ ನೆರವು ನೀಡಿ ಸಹಕರಿಸಿದವರನ್ನು ಸ್ಮರಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಹ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.