ADVERTISEMENT

ಕಾರ್ಕಳ | ‘ಜಾತ್ಯತೀತ ತೌಳವ ಆಚರಣೆ ಕಂಬಳ’

ಕಾಳು ಪಾಣಾರಗೆ ತುಳು ಅಕಾಡೆಮಿಯ ಚಾವಡಿ ತಮ್ಮನ; ಗೆಲುವಿನ ಕೋಣ ‘ಚೆನ್ನ’ನ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 6:34 IST
Last Updated 25 ಆಗಸ್ಟ್ 2025, 6:34 IST
ಕಾಳು ಪಾಣಾರ ಅವರ ‘ಚಾವಡಿ ತಮ್ಮನ’ ಕಾರ್ಯಕ್ರಮದಲ್ಲಿ ಕೆ.ಪಿ ಸುಚರಿತ ಶೆಟ್ಟಿ, ಗುಣಪಾಲ ಕಡಂಬ, ತಾರಾನಾಥ ಗಟ್ಟಿ ಕಾಪಿಕಾಡ್‌, ಶ್ರೀಧರ ಸನಿಲ್‌ ಮತ್ತಿತರರು ಪಾಲ್ಗೊಂಡಿದ್ದರು
ಕಾಳು ಪಾಣಾರ ಅವರ ‘ಚಾವಡಿ ತಮ್ಮನ’ ಕಾರ್ಯಕ್ರಮದಲ್ಲಿ ಕೆ.ಪಿ ಸುಚರಿತ ಶೆಟ್ಟಿ, ಗುಣಪಾಲ ಕಡಂಬ, ತಾರಾನಾಥ ಗಟ್ಟಿ ಕಾಪಿಕಾಡ್‌, ಶ್ರೀಧರ ಸನಿಲ್‌ ಮತ್ತಿತರರು ಪಾಲ್ಗೊಂಡಿದ್ದರು   

ಕಾರ್ಕಳ: ಕಂಬಳ ಕ್ರೀಡೆ ಮಾತ್ರವಲ್ಲ. ಸ್ಪರ್ಧೆ ಇದ್ದರೂ ಅದು ಜಾತ್ಯತೀತವಾಗಿ, ಮೇಲುಕೀಳು ಭಾವನೆ ಮರೆತು ಸಮಾಜದ ಎಲ್ಲರನ್ನು ಒಗ್ಗೂಡಿಸುವ ತೌಳವ ಆಚರಣೆ’ ಎಂದು ಕಂಬಳ ತಜ್ಞ ಗುಣಪಾಲ ಕಡಂಬ ಅಭಿಪ್ರಾಯಪಟ್ಟರು.

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ನ ಸೆಂಟರ್‌ ಫಾರ್‌ ಇಂಟರ್‌ ಕಲ್ಚರಲ್‌ ಸ್ಟಡೀಸ್‌ ಆ್ಯಂಡ್‌ ಡಯಲಾಗ್‌, ಸೆಂಟರ್‌ ಫಾರ್‌ ಕನ್ನಡ ಆ್ಯಂಡ್‌ ರೀಜನಲ್‌ ಲ್ಯಾಂಗ್ವೇಜಸ್‌ ಮತ್ತು ಲಯನ್ಸ್‌ ಕ್ಲಬ್‌ ಮುಂಡ್ಕೂರು-ಕಡಂದಲೆ ಸಹಯೋಗದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಚ್ಚೇರಿಪೇಟೆಯ ಲಯನ್ಸ್‌ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಕಂಬಳ ಕೋಣಗಳ ಯಜಮಾನ ಕಡಂದಲೆ ಕಾಳು ಪಾಣಾರ ಅವರಿಗೆ ‘ಚಾವಡಿ ತಮ್ಮನ’ ನೀಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಅಗಲಿದ ಗೆಲುವಿನ ಕೋಣ ‘ಚೆನ್ನ’ನನ್ನು ಸ್ಮರಿಸಿದ ಅವರು ಚೆನ್ನನನ್ನು ಆರಂಭದ ದಿನಗಳಲ್ಲಿ ಪೋಷಿಸುವಲ್ಲಿ ದೈವಾರಾಧಕರಾದ ಕಾಳು ಪಾಣಾರ ಅವರ ಕಾಳಜಿಯನ್ನು ಉಲ್ಲೇಖಿಸಿದರು. ಕಾಳು ಪಾಣಾರ ಮಾತನಾಡಿ ದೈವಾರಾಧನೆ ಮತ್ತು ಕಂಬಳ ತುಳುನಾಡಿನ ಸಂಸ್ಕೃತಿಯ ಕಣ್ಣುಗಳು ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ 'ಜನರು ಅಕಾಡೆಮಿಯತ್ತ ಬರಲು ಮತ್ತು ಅಕಾಡೆಮಿ ಜನರ ಬಳಿಗೆ ಹೋಗಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದರು.

ಮುಖಂಡರಾದ ಕೆ.ಪಿ ಸುಚರಿತ ಶೆಟ್ಟಿ, ಮುಂಡ್ಕೂರಿನ ಶ್ರೀಧರ ಸನಿಲ್‌, ಲಯನ್ಸ್‌ ಶಾಲೆಯ ಸಂಚಾಲಕ ಸತ್ಯಶಂಕರ ಶೆಟ್ಟಿ, ಲಯನ್ಸ್‌ ಅಧ್ಯಕ್ಷ ಯಶವಂತ ಆಚಾರ್ಯ, ಕಂಬಳ ಕೋಣಗಳ ಪೋಷಕರಾದ ಭಾಸ್ಕರ ಕೊಟ್ಯಾನ್‌ ಕೊಳಕೆ ಇರ್ವತ್ತೂರು, ಶ್ರೀಕಾಂತ ಭಟ್‌ ನಂದಳಿಕೆ, ಮಾಹೆ ಸಿಐಎಸ್‌ಡಿ ಸಂಯೋಜಕ ಪ್ರವೀಣ್‌ ಶೆಟ್ಟಿ, ತುಳು ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ, ಪತ್ರಕರ್ತ ಶರತ್‌ ಕಿನ್ನಿಗೋಳಿ, ಸಿಐಎಸ್‌ಡಿಯ ಸಂಶೋಧನ ಸಹವರ್ತಿ ನಿತೇಶ್‌ ಪಡುಬಿದ್ರಿ, ಕಂಬಳದ ಅನುಭವಿ ಮಂಜುನಾಥ ಪ್ರಭು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.