ADVERTISEMENT

ಕಾಪುವಿನಲ್ಲಿ ಕಡಲ್ಕೊರೆತ: ತೆಂಗಿನ ಮರಗಳು ಸಮುದ್ರ ಪಾಲಾಗುವ ಆತಂಕ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 13:11 IST
Last Updated 9 ಜುಲೈ 2022, 13:11 IST
ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ನಡಿಪಟ್ನದಲ್ಲಿ ಕಡಲ್ಕೊರೆತ ಉಂಟಾಗಿದೆ.
ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ನಡಿಪಟ್ನದಲ್ಲಿ ಕಡಲ್ಕೊರೆತ ಉಂಟಾಗಿದೆ.   

ಉಡುಪಿ: ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು ಕಾಪು ತಾಲ್ಲೂಕು ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಪಟ್ನದಲ್ಲಿ ಕಡಲ್ಕೊರೆತ ಉಂಟಾಗಿದೆ. ತೆಂಗಿನ ಮರಗಳು ಸಮುದ್ರ ಪಾಲಾಗುವ ಆತಂಕ ಎದುರಾಗಿದೆ.

ಬ್ಲೂಫ್ಲಾಗ್‌ ಬೀಚ್‌ಗೆ ಹೋಗುವ ರಸ್ತೆ ಕುಸಿಯುವ ಭೀತಿ ಉಂಟಾಗಿದೆ. ಪಾದೆಬೆಟ್ಟುವಿನಲ್ಲಿ ನೆರೆ ಬಂದಿದ್ದು ಹಲವು ಮನೆಗಳಿಗೆ ನೀರು ನುಗ್ಗಿದೆ. ಬೈಂದೂರು ತಾಲ್ಲೂಕಿನಲ್ಲಿ ಮಳೆ ತಗ್ಗಿದ್ದು, ಮುಳುಗಡೆಯಾಗಿದ್ದ ನಾವುಂದ ಗ್ರಾಮದಲ್ಲಿ ನೆರೆ ಇಳಿದಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಕುಂದಾಪುರ ತಾಲ್ಲೂಕಿನಲ್ಲಿ 12, ಬೈಂದೂರು ತಾಲ್ಲೂಕಿನಲ್ಲಿ 6, ಹೆಬ್ರಿಯಲ್ಲಿ 2, ಕಾರ್ಕಳ ಹಾಗೂ ಬ್ರಹ್ಮಾವರ ತಾಲ್ಲೂಕುಗಳಲ್ಲಿ ತಲಾ 1 ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ ತಾಲ್ಲೂಕು ಕುಚ್ಚೂರಿನಲ್ಲಿ 22.8 ಸೆಂ.ಮೀ, ಕುರ್ಕಾಲಿನಲ್ಲಿ 19.1 ಹಾಗೂ ನಾಲ್ಕೂರಿನಲ್ಲಿ 18.4 ಸೆಂ.ಮೀ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.