ADVERTISEMENT

ಕಾಪು ಬೀಚ್‌ನಲ್ಲಿ ಮಹಾಶಿವರಾತ್ರಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:51 IST
Last Updated 14 ಫೆಬ್ರುವರಿ 2026, 7:51 IST
<div class="paragraphs"><p>ಬೀಚ್‌ – ಪ್ರಾತಿನಿಧಿಕ ಚಿತ್ರ</p></div>

ಬೀಚ್‌ – ಪ್ರಾತಿನಿಧಿಕ ಚಿತ್ರ

   

ಕಾಪು (ಪಡುಬಿದ್ರಿ): ಗುರುವನ ಫೌಂಡೇಷನ್ ಅರ್ಪಿಸುವ ಸಾಮೂಹಿಕ ಮಹಾಶಿವರಾತ್ರಿ ಉತ್ಸವ ಕಾಪು ಸಮುದ್ರ ಕಿನಾರೆಯ ಲೈಟ್‌ಹೌಸ್ ಬಳಿ ಫೆ. 15ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಸಂಜೆ 4ರಿಂದ ಮಧ್ಯರಾತ್ರಿ 12ರವರೆಗೆ ಕಾರ್ಯಕ್ರಮ ನಡೆಯಲಿದೆ. ಸಂಕೀರ್ತನೆ, ಭಜನೆ, ನೃತ್ಯ, ವೈವಿಧ್ಯಮಯ ಗಾನವೈಭವ, ಮರಳಿಂದ ರಚಿಸಿದ ಮಹಾಶಿವಲಿಂಗಕ್ಕೆ ಬ್ರಹ್ಮಶ್ರೀ ಕುಮಾರ ತಂತ್ರಿ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ, ಸಪ್ತ ಋಷಿ ಆರತಿ ನೆರವೇರಲಿದೆ. ಹಿಮಾಲಯ ಯೋಗಿ ಮಟ್ಟು ಹರೀಶ ಮಧ್ಯಸ್ಥ ಸಾನಿಧ್ಯದಲ್ಲಿ, ರಾಜಶೇಖರ ಜ್ಞಾನೇಶ ಮಾರ್ಗದರ್ಶನದಲ್ಲಿ ಮಹಾಶಿವರಾತ್ರಿ ಆಚರಿಸಲಾಗುವುದು ಎಂದರು.

ADVERTISEMENT

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಶಾಸಕ ಯಶ್‌ಪಾಲ್ ಸುವರ್ಣ, ಮುಖಂಡರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ, ಕರ್ಣಾಟಕ ಬ್ಯಾಂಕ್‌ನ ರಾಘವೇಂದ್ರ ಭಟ್, ಸಮಾಜ ಸೇವಕ ಪ್ರೇಮ್ ಕುಮಾರ್ ಭಾಗವಹಿಸುವರು. 

ಸುದ್ದಿಗೋಷ್ಠಿಯಲ್ಲಿ ಗೀತಾಂಜಲಿ ಸುವರ್ಣ, ರಾಜಶೇಖರ್, ಅರ್ಜುನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.