
ಕಾರ್ಕಳ: ‘ಅವಿಭಜಿತ ದ.ಕ. ಜಿಲ್ಲೆಯ ಜನರು ಕಲೆ, ಸಂಸ್ಕೃತಿ, ಸಂಗೀತವನ್ನು ಆರಾಧಿಸುವವರು. ಕಲಾವಿದರಿಗೆ ಅವರು ನೀಡುವ ಗೌರವ, ಪ್ರೋತ್ಸಾಹ ಬೇರೆಲ್ಲೂ ಕಾಣಸಿಗದು. ಈ ಜಿಲ್ಲೆಯ ಜನರ ಪ್ರೀತಿ, ಹೃದಯ ಶ್ರೀಮಂತಿಕೆಗೆ ನಾನು ಮಾರುಹೋಗಿದ್ದೇನೆ’ ಎಂದು ನಿವೃತ್ತ ಜಿಲ್ಲಾಧಿಕಾರಿ ಮುದ್ದು ಮೋಹನ್ ಹೇಳಿದರು.
ಕಾರ್ಕಳದ ಶಾಸ್ತ್ರೀಯ ಸಂಗೀತ ಸಭಾದ ಸಹಯೋಗದಲ್ಲಿ ತಾಲ್ಲೂಕಿನ ಕಾಂತಾವರ ಕನ್ನಡ ಸಂಘದ 50ರ ಸಂಭ್ರಮದ ಪ್ರಯುಕ್ತ ನಗರದಲ್ಲಿ ಆಯೋಜಿಸಿದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾ ಸ್ಥಾಪಕ ಕಾರ್ಯದರ್ಶಿ ಪ್ರಕಾಶ್ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುದ್ದು ಮೋಹನ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಹಾರ್ಮೋನಿಯಂನಲ್ಲಿ ಪಂಚಾಕ್ಷರಿ ಹಿರೇಮಠ, ತಬಲಾದಲ್ಲಿ ಕೇಶವ ಜೋಶಿ ಬೆಂಗಳೂರು, ವಯಲಿನ್‌ನಲ್ಲಿ ಟಿ. ರಂಗ ಪೈ, ತಂಬೂರಿಯಲ್ಲಿ ಉಡುಪಿಯ ಸಪ್ನಾರಾಜ್ ಸಹಕರಿಸಿದರು. ಮಿತ್ರಪ್ರಭಾ ಹೆಗ್ಡೆ, ದಿವಾಕರ್ ಕುಮಾರ್, ರತ್ನಾಕರ ಹೆಬ್ಬಾರ್ ಿದ್ದರು.
ಸದಾನಂದ ನಾರಾವಿ ನಿರೂಪಿಸಿದರು. ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ.ಮೊಗಸಾಲೆ ಸ್ವಾಗತಿಸಿದರು. ನಿತ್ಯಾನಂದ ಪೈ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.