ಕಾರ್ಕಳ: ‘ಎನ್‌ಎಸ್‌ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳು ಪಡೆಯುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ವೆಂಕಟರಮಣ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಗೀತಾ ಜಿ ಹೇಳಿದರು.
ಇಲ್ಲಿನ ಬೊಂಡುಕುಮೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವೆಂಕಟರಮಣ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಅಜೆಕಾರಿನ ವಕೀಲೆ ಮಮತಾ ಶಿಬಿರದ ಸಮಾರೋಪ ಭಾಷಣ ಮಾಡಿದರು. ಎಸ್.ವಿ.ಎಜ್ಯುಕೇಶನ್ ಟ್ರಸ್ಟ್ ಕೋಶಾಧ್ಯಕ್ಷ ಐ. ರವೀಂದ್ರನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು.
ಪ್ರಕಾಶ್ ಡಿಸೋಜ, ಪ್ರಶಾಂತ ಶೆಟ್ಟಿ, ಬೊಂಡುಕುಮೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುರೇಖಾ ಬಿ, ಮರ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ, ನಿವೃತ್ತ ಮುಖ್ಯಶಿಕ್ಷಕ ಭಾಸ್ಕರ ಶೆಟ್ಟಿ ಕುಂಟಿನಿ, ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನುಷಾ ಶೆಟ್ಟಿ, ಘಟಕದ ನಾಯಕಿ ಲಾವಣ್ಯಾ, ನಯನಾ, ದಿಶಾ, ಅನನ್ಯಾ, ವಿದ್ಯಾರ್ಥಿ ಸಂಘದ ನಾಯಕಿ ಸೌಜನ್ಯಾ, ಚೈತ್ರಾ, ಪವಿತ್ರಾ, ನವ್ಯಾ ಮತ್ತು ಸಹ ಶಿಬಿರಾಧಿಕಾರಿ ಸೋನಾ ಇದ್ದರು.
ವಿದ್ಯಾರ್ಥಿನಿ ಪವಿತ್ರಾ ನಿರೂಪಿಸಿದರು. ವಿದ್ಯಾರ್ಥಿನಿ ಸುರಕ್ಷಾ ಸ್ವಾಗತಿಸಿದರು. ಎನ್ ಎಸ್. ಎಸ್ ಯೋಜನಾಧಿಕಾರಿ ರೇಖಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.