ಕಾರ್ಕಳ: ದೆಹಲಿಯಲ್ಲಿ ಇದೇ 26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದ ಪರೇಡ್‌ನಲ್ಲಿ ಭಾಗವಹಿಸಲು ಇಲ್ಲಿನ ಭುವನೇಂದ್ರ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳಾದ ಪನ್ನಗ ಆರ್, ದೀಕ್ಷಿತಾ ಎಸ್. ಆಯ್ಕೆಯಾಗಿದ್ದಾರೆ.
ತೃತೀಯ ಬಿಸಿಎ ವಿದ್ಯಾರ್ಥಿ ಪನ್ನಗ ಅವರು ಕಳಸದ ರಮೇಶ್ ರಾವ್, ಗಿರಿಜಾ ಎಸ್. ದಂಪತಿ ಪುತ್ರ. ದೀಕ್ಷಿತಾ ಅವರು ಕಾರ್ಕಳದ ಗಿರಿಧರ್ ಶೆಟ್ಟಿಗಾರ್, ವಿಶಾಲಾಕ್ಷಿ ದಂಪತಿ ಪುತ್ರಿ. ಅವರು ಕರ್ನಾಟಕ, ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.