ಕಾರ್ಕಳ: ಇಲ್ಲಿನ ಬಂಗ್ಲೆಗುಡ್ಡೆ ನೂರ್ ಮಸೀದಿಯಲ್ಲಿ ಭಾನುವಾರ ಜಮೀಯ್ಯತುಲ್ ಫಲಾಹ್ ಘಟಕದ ವತಿಯಿಂದ ಇಫ್ತಾರ್ ಕೂಟ ನಡೆಯಿತು.
ಘಟಕದ ಅಧ್ಯಕ್ಷ ಅಷ್ಪಕ್ ಅಹಮದ್ ಮಾತನಾಡಿ, ಪವಿತ್ರ ರಂಜಾನ್ ತಿಂಗಳಲ್ಲಿ ಸಂಜೆಯ ಇಫ್ತಾರ್ ಸಮಯದಲ್ಲಿ ಉಪವಾಸ ವ್ರತಧಾರಿಯ ಪ್ರಾರ್ಥನೆ, ಬೇಡಿಕೆಗಳನ್ನು ಅಲ್ಲಾಹ್ ಸ್ವೀಕರಿಸಿ ಈಡೇರಿಸುತ್ತಾನೆ. ಉಪವಾಸವು ನಮ್ಮ ಮನಸ್ಸು, ದೇಹವನ್ನು ಶುದ್ಧಗೊಳಿಸುತ್ತದೆ ಎಂದರು.
ಧರ್ಮಗುರು ಮೌಲಾನ ಅಬ್ದುಲ್ ಹಫೀಜ್ ಮಾತನಾಡಿ, ರಂಜಾನ್ ಉಪವಾಸ ನಮ್ಮ ಆತ್ಮಶುದ್ಧಿ ಮಾಡುತ್ತದೆ. ಸಮಾಜದ ಪ್ರತಿಞ ವ್ಯಕ್ತಿಯ ಜವಾಬ್ದಾರಿ ಮಹತ್ವದ್ದು ಎಂದರು.
ನೂರ್ ಮಸೀದಿ ಧರ್ಮಗುರು ಜಾಫರ್ ಸಾಹೇಬ್, ಘಟಕದ ಕಾರ್ಯದರ್ಶಿ ಸೈಯದ್ ಅಬ್ಬಾಸ್, ಸದಸ್ಯರು, ಉಪವಾಸ ವ್ರತಧಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.