ADVERTISEMENT

ಕಾರ್ಕಳ: ಕೆರೆ ದೀಪೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 5:25 IST
Last Updated 15 ನವೆಂಬರ್ 2022, 5:25 IST
ಕಾರ್ಕಳ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಾಲಯದ ಲಕ್ಷದೀಪೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಶೇಷತೀರ್ಥ ಕೆರೆಯಲ್ಲಿ ಕೆರೆ ದೀಪೋತ್ಸವ ನಡೆಯಿತು.
ಕಾರ್ಕಳ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಾಲಯದ ಲಕ್ಷದೀಪೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಶೇಷತೀರ್ಥ ಕೆರೆಯಲ್ಲಿ ಕೆರೆ ದೀಪೋತ್ಸವ ನಡೆಯಿತು.   

ಕಾರ್ಕಳ: ಇಲ್ಲಿನ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಾಲ ಯದ ಲಕ್ಷದೀಪೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಶೇಷತೀರ್ಥ ಕೆರೆಯಲ್ಲಿ ಕೆರೆ ದೀಪೋತ್ಸವ ನಡೆಯಿತು.

ಸಂಜೆ ದೇವಸ್ಥಾನದಲ್ಲಿ ಚಕ್ರಉತ್ಸವದ ಬಳಿಕ ಕೆಂಪು ಗರುಡ ವಾಹನ ಉತ್ಸವ ನಡೆದವು. ದೇವಾಲಯದ ಶೇಷತೀರ್ಥ ಕೆರೆಗೆ ಆಗಮಿಸಿದ ದೇವರನ್ನು ಬಹುಪರಾಕ್ ಸ್ತೋತ್ರ, ಭಜನೆಗಳ ಮೂಲಕ ಉತ್ಸವದ ಕೆರೆಗೆ ಕರೆದೊಯ್ಯಲಾಯಿತು. ಕೆರೆಯ ಉತ್ಸವದ ಸಂದರ್ಭದಲ್ಲಿ ವೈವಿಧ್ಯಮಯ ಸಿಡಿಮದ್ದು ಪ್ರದರ್ಶನ, ಸಂಕೀರ್ತನೆ, ವೇದ ಮಂತ್ರಗಳ ಘೋಷ ಗಮನ ಸೆಳೆದವು. ಪರ್ಯಾಯ ಅರ್ಚಕ ಗೋಪಾಲಕೃಷ್ಣ ಜೋಶಿ, ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಪ್ರಭು, ವೆಂಕಟೇಶ ಭಟ್, ಸರ್ವೋತ್ತಮ ಜೋಶಿ, ಕೃಷ್ಣಾನಂದ ತಂತ್ರಿ, ಪ್ರದೀಪ ಭಟ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT