ADVERTISEMENT

ಕಾರ್ಕಳ: ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆಗೆ ಜೀವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:30 IST
Last Updated 8 ಜನವರಿ 2026, 2:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಕಾರ್ಕಳ: ಚಾಕು ಹಿಡಿದು ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಘಟನೆ ತಾಲ್ಲೂಕಿನ ಕುಕ್ಕುಂದೂರಿನಲ್ಲಿ ನಡೆದಿದೆ.

ADVERTISEMENT

ಶಿಫಾ ಫಾತಿಮಾ, ಅನೀಕ್‌, ಜೈನಬ ಎಂಬುವರು ಮನೆ ಬಾಗಿಲನ್ನು ಒದ್ದು, ಕಿಟಕಿ ಗಾಜು, ದ್ವಿಚಕ್ರ ವಾಹನವನ್ನು ರಾಡ್‌, ಕಲ್ಲಿನಿಂದ ಒಡೆದು ಜೀವ ಬೆದರಿಕೆ ಒಡ್ಡಿದ್ದಾರೆ. ಮನೆಯ ಸ್ವತ್ತುಗಳಿಗೆ ಸುಮಾರು ₹60 ಸಾವಿರ ನಷ್ಟ ಉಂಟು ಮಾಡಿದ್ದಾರೆ ಎಂದು ತಾಹಿರಾ ಬಾನು ಎಂಬುವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.