ADVERTISEMENT

ಮೈಸೂರು ವಿಭಾಗಮಟ್ಟದ ಯೋಗ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 4:50 IST
Last Updated 9 ಅಕ್ಟೋಬರ್ 2024, 4:50 IST
ಕಾರ್ಕಳ ಭುವನೇಂದ್ರ ಪ್ರೌಢಶಾಲೆ ಯಲ್ಲಿ ಮೈಸೂರು ವಿಭಾಗಮಟ್ಟದ ಯೋಗಾಸನ ಸ್ಪರ್ಧೆಗೆ ಈಚೆಗೆ ಚಾಲನೆ ನೀಡಲಾಯಿತುಕಾರ್ಕಳ ಭುವನೇಂದ್ರ ಪ್ರೌಢಶಾಲೆ ಯಲ್ಲಿ ಮೈಸೂರು ವಿಭಾಗಮಟ್ಟದ ಯೋಗಾಸನ ಸ್ಪರ್ಧೆಗೆ ಈಚೆಗೆ ಚಾಲನೆ ನೀಡಲಾಯಿತು
ಕಾರ್ಕಳ ಭುವನೇಂದ್ರ ಪ್ರೌಢಶಾಲೆ ಯಲ್ಲಿ ಮೈಸೂರು ವಿಭಾಗಮಟ್ಟದ ಯೋಗಾಸನ ಸ್ಪರ್ಧೆಗೆ ಈಚೆಗೆ ಚಾಲನೆ ನೀಡಲಾಯಿತುಕಾರ್ಕಳ ಭುವನೇಂದ್ರ ಪ್ರೌಢಶಾಲೆ ಯಲ್ಲಿ ಮೈಸೂರು ವಿಭಾಗಮಟ್ಟದ ಯೋಗಾಸನ ಸ್ಪರ್ಧೆಗೆ ಈಚೆಗೆ ಚಾಲನೆ ನೀಡಲಾಯಿತು   

ಕಾರ್ಕಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಭಾಗೀಯ ಕಾರ್ಯದರ್ಶಿ ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರು ಮೈಸೂರು, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಭುವನೇಂದ್ರ ವಿದ್ಯಾಸಂಸ್ಥೆ ಸಹಯೋಗದಲ್ಲಿ ಸಂಸ್ಥೆಯ ವರದೇಂದ್ರ ಸದನದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗಮಟ್ಟದ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳ ಯೋಗಾಸನ ಸ್ಪರ್ಧೆ ಈಚೆಗೆ ನಡೆಯಿತು.

ಉದ್ಘಾಟಿಸಿದ ವೆಂಕಟರಮಣ ದೇವಳದ ಮೊಕ್ತೇಸರ ಕೆ. ಜಯರಾಮ ಪ್ರಭು ಮಾತನಾಡಿ, ಯೋಗ ಮಾನಸಿಕ ದುಗುಡ, ಒತ್ತಡ ನಿವಾರಿಸುವ ಉಪಕ್ರಮ. ಭೌತಿಕ, ಮಾನಸಿಕ, ಶಾರೀರಿಕ, ಆಧ್ಯಾತ್ಮಿಕವಾಗಿ ವ್ಯಕ್ತಿತ್ವ ರೂಪಣೆಗೆ ಸಹಕಾರಿಯಾಗಿದೆ. ಹಾಗಾಗಿ ಯೋಗ ವಿಶ್ವ ಮನ್ನಣೆ ಗಳಿಸಿದೆ ಎಂದರು.

ಮೈಸೂರು ವಿಭಾಗ ದೈಹಿಕ ಶಿಕ್ಷಣ ಉಪ ನಿರ್ದೇಶಕ ಪರಶುರಾಮಪ್ಪ, ವರ್ಗಾವಣೆಗೊಳ್ಳುತ್ತಿರುವ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ ಬಿ.ಎ, ಉದ್ಯಮಿಗಳಾದ ಎಸ್.‌ ನಿತ್ಯಾನಂದ ಪೈ, ಎ. ಚಂದ್ರಶೇಖರ ಹೆಗ್ಡೆ, ಯೋಗಸಾಧಕ ನರೇಂದ್ರ ಕಾಮತ್‌ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಣಪತಿ ಕೆ, ಕಾರ್ಕಳ ತಹಶೀಲ್ದಾರ್‌ ಪ್ರತಿಭಾ ಆರ್, ಹೆಬ್ರಿ ತಹಶೀಲ್ದಾರ್ ಪ್ರಸಾದ, ಲೆಕ್ಕ ಪರಿಶೋಧಕ ಕೆ. ಕಮಲಾಕ್ಷ ಕಾಮತ್‌ ಶುಭ ಹಾರೈಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ADVERTISEMENT

ಭುವನೇಂದ್ರ ಪ್ರೌಢಶಾಲಾ ಸಂಚಾಲಕ ನರೇಂದ್ರ ಕಾಮತ್‌ ಕೆ. ಸ್ವಾಗತಿಸಿದರು. ಮುಖ್ಯಶಿಕ್ಷಕ ಆರ್.‌ ನಾರಾಯಣ ಶೆಣೈ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂಜಯ ಕುಮಾರ್‌ ವಂದಿಸಿದರು. ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರವಿಚಂದ್ರ ಕಾರಂತ, ರವೀಂದ್ರ, ಸತ್ಯನಾರಾಯಣ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸಂತೋಷ ಕುಮಾರ್‌ ಶೆಟ್ಟಿ, ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯಕ್‌, ಪ್ರಕಾಶ, ಆನಂದ ಪೂಜಾರಿ, ಭುವನೇಂದ್ರ ಆಂಗ್ಲಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ವಿದ್ಯಾ ಕಿಣಿ ಇದ್ದರು.

ಮೈಸೂರು ವಿಭಾಗದ 8 ಜಿಲ್ಲೆಗಳ 200 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ 65 ತೀರ್ಪುಗಾರರು ಸ್ಪರ್ಧೆ  ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.