ADVERTISEMENT

ಬ್ರಹ್ಮಾವರ: ಕಸಾಪ– ಸಾಹಿತ್ಯ ಸಂಜೆ

​ಪ್ರಜಾವಾಣಿ ವಾರ್ತೆ
Published 18 ಮೇ 2025, 14:33 IST
Last Updated 18 ಮೇ 2025, 14:33 IST
ಕಸಾಪ ಬ್ರಹ್ಮಾವರ ವತಿಯಿಂದ ನಡೆದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ನಾಗೇಶ ಮಯ್ಯ ಅವರನ್ನು ಗೌರವಿಸಲಾಯಿತು
ಕಸಾಪ ಬ್ರಹ್ಮಾವರ ವತಿಯಿಂದ ನಡೆದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ನಾಗೇಶ ಮಯ್ಯ ಅವರನ್ನು ಗೌರವಿಸಲಾಯಿತು   

ಬ್ರಹ್ಮಾವರ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ, ಸಮಗ್ರತಾ ಗುಂಡ್ಮಿ ವತಿಯಿಂದ ಗುಂಡ್ಮಿ ಶ್ರೀಪತಿ ಮಯ್ಯ ಅವರ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ನಡೆಯಿತು.

ಗುಂಡ್ಮಿಯ ಭಗವತಿ ಜ್ಞಾನವಿಕಾಸ ಕೇಂದ್ರ, ಮಣೂರಿನ ಸ್ನೇಹಕೂಟ, ಸಾಲಿಗ್ರಾಮ ವಿಪ್ರ ಮಹಿಳಾ ವಲಯ, ಸಾಲಿಗ್ರಾಮ ಮಹಿಳಾ ವೇದಿಕೆ ತಂಡದವರು ವೈವಿಧ್ಯಮಯ ಗ್ರಾಮೀಣ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು. ಕುಣಿತ ಭಜನೆ, ನಾಟಕದ ಭಾಗಂಶ ನೃತ್ಯ, ಪ್ರಹಸನ, ಹಳ್ಳಿ ಹಾಡು ಎಲ್ಲರ ಗಮನ ಸೆಳೆದವು.

ವಿಷ್ಣುಮೂರ್ತಿ ಹೊಳ್ಳ, ಉಪೇಂದ್ರ ಸೋಮಯಾಜಿ ಅವರು ಕೃಷಿ, ಸಾಹಿತ್ಯದಲ್ಲಿ ತೊಡಗಿಸಿಕೊಂಡ ಜಿ. ನಾಗೇಶ ಮಯ್ಯ, ತಮ್ಮಯ್ಯ ಮೇಸ್ತ್ರಿ ಅವರನ್ನು ಗೌರವಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ, ಅಚ್ಚುತ ಪೂಜಾರಿ, ವಿಶ್ವನಾಥ ಖಾರ್ವಿ ಅವರು ಪಿಯುಸಿಯಲ್ಲಿ ಶೇ 90 ಅಂಕ ಪಡೆದ ರಶ್ಮಿ ಭಟ್, ಅನನ್ಯಾ, ಅನಿಶಾ ಅವರಿಗೆ ವಿದ್ಯಾರ್ಥಿವೇತನ ನೀಡಿದರು.

ADVERTISEMENT

ಸಮಗ್ರತಾ ಗುಂಡ್ಮಿಯ ಶಿವಾನಂದ ಮಯ್ಯ, ಕಾಶಿ ಈಶ್ವರ ಮಯ್ಯ, ಬಾಲಚಂದ್ರ ಮಯ್ಯ, ಉದಯ ಮಯ್ಯ, ಗಣೇಶ ಹೆಬ್ಬಾರ್ ಭಾಗವಹಿಸಿದ್ದರು. ನಳಿನಿ ಶ್ರೀಪತಿ ಮಯ್ಯ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.