ADVERTISEMENT

ಕೃಷ್ಣನಿಗೆ ‘ಉಡುಪಿ ಕೇದಾರ ಕಜೆ’ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 15:19 IST
Last Updated 7 ಡಿಸೆಂಬರ್ 2021, 15:19 IST
ಕೇದಾರೋತ್ಥಾನ ಟ್ರಸ್ಟ್‌ನಿಂದ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿದ್ದ ‘ಹಡಿಲು ಭೂಮಿ ಕೃಷಿ ಅಂದೋಲನ’ದಡಿ ಬೆಳೆದ ಸಾವಯವ 100 ಕೆ.ಜಿ ಭತ್ತವನ್ನು ಬೆಳ್ತಿಗೆ ಅಕ್ಕಿಯನ್ನಾಗಿ ಮಾಡಿಸಿ ಮಂಗಳವಾರ ಕೃಷ್ಣನಿಗೆ ಅರ್ಪಿಸಲಾಯಿತು.
ಕೇದಾರೋತ್ಥಾನ ಟ್ರಸ್ಟ್‌ನಿಂದ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿದ್ದ ‘ಹಡಿಲು ಭೂಮಿ ಕೃಷಿ ಅಂದೋಲನ’ದಡಿ ಬೆಳೆದ ಸಾವಯವ 100 ಕೆ.ಜಿ ಭತ್ತವನ್ನು ಬೆಳ್ತಿಗೆ ಅಕ್ಕಿಯನ್ನಾಗಿ ಮಾಡಿಸಿ ಮಂಗಳವಾರ ಕೃಷ್ಣನಿಗೆ ಅರ್ಪಿಸಲಾಯಿತು.   

ಉಡುಪಿ: ಕೇದಾರೋತ್ಥಾನ ಟ್ರಸ್ಟ್‌ನಿಂದ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿದ್ದ ‘ಹಡಿಲು ಭೂಮಿ ಕೃಷಿ ಅಂದೋಲನ’ದಡಿ ಬೆಳೆದ ಸಾವಯವ ಕುಚ್ಚಲಕ್ಕಿ ಭತ್ತವನ್ನು ‘ಉಡುಪಿ ಕೇದಾರ ಕಜೆ' ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, 100 ಕೆ.ಜಿ ಭತ್ತವನ್ನು ಬೆಳ್ತಿಗೆ ಅಕ್ಕಿಯನ್ನಾಗಿ ಮಾಡಿಸಿ ಮಂಗಳವಾರ ಕೃಷ್ಣನಿಗೆ ಅರ್ಪಿಸಲಾಯಿತು.

ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷರು ಹಾಗೂ ಶಾಸಕರೂ ಆದ ಕೆ.ರಘುಪತಿ ಭಟ್ ಉಡುಪಿ ಕೃಷ್ಣನಿಗೆ ಅಕ್ಕಿ ಸಮರ್ಪಿಸಿ ಬಳಿಕ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಸೋಲೂರು ಆರ್ಯ ಈಡಿಗ ಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ, ಕೇದಾರೋತ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಟ್ರಸ್ಟ್ ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ, ಪ್ರಭಾಕರ್ ಪೂಜಾರಿ, ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹೆಬ್ಬಾರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.