ADVERTISEMENT

ಕೊಗ್ಗ ಕಾಮತ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 15:39 IST
Last Updated 3 ಅಕ್ಟೋಬರ್ 2021, 15:39 IST
ಕೊಗ್ಗ ಕಾಮತ್‌
ಕೊಗ್ಗ ಕಾಮತ್‌   

ಉಡುಪಿ: 5 ದಶಕಗಳಿಗೂ ಹೆಚ್ಚು ಕಾಲ ಉಡುಪಿಯಲ್ಲಿ ದಿನಪತ್ರಿಕೆ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದ ಎಂ.ಕೊಗ್ಗ ಕಾಮತ್ (93) ಶನಿವಾರಚಿಟ್ಪಾಡಿಯಲ್ಲಿ ನಿಧನರಾದರು.

ಮೃತರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬರು ಪುತ್ರ ಇದ್ದಾರೆ. ಉಡುಪಿಯ ರಥಬೀದಿಯಲ್ಲಿರುವ ಎಸ್‌.ಎನ್‌ ನ್ಯೂಸ್ ಏಜೆನ್ಸಿಯಲ್ಲಿ ಕೊಗ್ಗ ಕಾಮತ್ ಅವರು ಸುಧೀರ್ಘ ಅವಧಿಯವರೆಗೂ ಪತ್ರಿಕೆ ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಮೃತರ ಅಂತ್ಯಕ್ರಿಯೆ ಭಾನುವಾರ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.