ADVERTISEMENT

ಬ್ರಹ್ಮಾವರ: ಕೋಟ ಅಮೃತೇಶ್ವರಿಯ ವಾರ್ಷಿಕ ಗೆಂಡೋತ್ಸವ, ಹಾಲುಹಬ್ಬ ಸಂಪನ್ನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:54 IST
Last Updated 12 ಜನವರಿ 2026, 6:54 IST
ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಗೆಂಡೋತ್ಸವ ಸಂಪನ್ನಗೊಂಡಿತು
ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಗೆಂಡೋತ್ಸವ ಸಂಪನ್ನಗೊಂಡಿತು   

ಬ್ರಹ್ಮಾವರ: ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ವಾರ್ಷಿಕ ಹಾಲು ಹಬ್ಬ, ಗೆಂಡೋತ್ಸವ ಕಾರ್ಯಕ್ರಮ ಶನಿವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಅಮೃತೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ರೂಪದಲ್ಲಿ ಸಂದರ್ಶಿಸಲಾಯಿತು. ನಾಗದೇವರಿಗೆ ಹಾಲಿಟ್ಟು ಸೇವೆ ಸಮರ್ಪಿಸಿ ಪಾತ್ರಿವರ್ಗ ಗೆಂಡವನ್ನು ಸ್ಪರ್ಶಿಸಿ ಬಳಿಕ ಭಕ್ತರು ಹರಕೆ ನೆರವೇರಿಸಿದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ. ಕುಂದರ್, ಸದಸ್ಯರಾದ ರತನ್ ಐತಾಳ, ಸುಭಾಶ್‌ ಶೆಟ್ಟಿ, ಗಣೇಶ ನೆಲ್ಲಿಬೆಟ್ಟು, ಶಿವ ಪೂಜಾರಿ, ಜ್ಯೋತಿ ಡಿ. ಕಾಂಚನ್, ಸುಧಾ ಎ. ಪೂಜಾರಿ, ಚಂದ್ರ ಆಚಾರ್, ಸುಬ್ರಾಯ ಜೋಗಿ ಭಾಗವಹಿಸಿದ್ದರು. ರಾತ್ರಿ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ವಿವಿಧ ಸಂಘ ಸಂಸ್ಥೆಗಳು ಸ್ವಯಂ ಸೇವಕರಾಗಿ ಪಾಲ್ಗೊಂಡರು.

ADVERTISEMENT

ತುಲಾಭಾರ ಸೇವೆ: ಭಾನುವಾರ ಢಕ್ಕೆ ಬಲಿ, ತುಲಾಭಾರ ಸೇವಾ ನಡೆದವು. 300ಕ್ಕೂ ಅಧಿಕ ಸೇವಾರ್ಥಿಗಳು ತುಲಾಭಾರ ಹರಕೆ ಸಮರ್ಪಿಸಿದರು. 

ದೇವಸ್ಥಾನದ ಅರ್ಚಕರಾದ ರೂಪೇಶ್ ಜೋಗಿ, ಅಮೃತ್ ಜೋಗಿ, ದಾಮೋದರ ಜೋಗಿ, ಗಣೇಶ ಜೋಗಿ, ಸಂತೋಷ್ ಜೋಗಿ, ಅಶ್ವಥ್ ಜೋಗಿ ಭಾಗವಹಿಸಿದ್ದರು.

ದೇವಸ್ಥಾನದಲ್ಲಿ ಭಾನುವಾರ ತುಲಾಭಾರ ಸೇವಾ ಕಾರ್ಯಕ್ರಮಗಳು ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.