ಕೋಟ (ಬ್ರಹ್ಮಾವರ): ತಾಲ್ಲೂಕಿನಲ್ಲಿ ನಿರಂತರ ಭಾರಿ ಮಳೆಯಾಗುತ್ತಿದ್ದು ಕೋಟ, ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮಟ್ಟು, ಬನ್ನಾಡಿ ಪ್ರದೇಶದಲ್ಲಿ ಹಲವು ಮನೆಗಳು, ಕೃಷಿ ಭೂಮಿ ಜಲಾವೃತಗೊಂಡಿವೆ.
ಏಳೆಂಟು ಕುಟುಂಬಗಳು ನೆರೆ ಪೀಡಿತವಾಗಿವೆ. ಹಲವು ವರ್ಷಗಳಿಂದ ಈ ಭಾಗಗಳು ನೆರೆಗೆ ತುತ್ತಾಗುತ್ತಿದ್ದು, ಸ್ಥಳೀಯ ಹೊಳೆಯ ನೀರು ಸರಾಗವಾಗಿ ಹರಿಯಲಾಗದೆ ನೆರೆ ಉದ್ಭವಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪ.
ಸೀತಾನದಿ, ಮಡಿಸಾಲು ಉಕ್ಕಿ ಹರಿಯುತ್ತಿದ್ದರೂ ಪ್ರವಾಹ ಕಾಣಿಸಿಕೊಂಡಿಲ್ಲ. ಕೋಟ ಪಡುಕೆರೆ, ಮಣೂರು, ಮೂಡುಗಿಳಿಯಾರಿನಲ್ಲಿ ಕೃಷಿ ಭೂಮಿ ಜಲಾವೃತಗೊಂಡಿವೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೃಷಿ ನಾಟಿ ಕಾರ್ಯಕ್ಕೂ ಅಡಚಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.