ಕೋಟ(ಬ್ರಹ್ಮಾವರ): ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣೂರು ಪಡುಕೆರೆಯ ಬಳಿ ಶಿವರಾಜ್ ಸ್ಟೋರ್ ರಸ್ತೆಯಿಂದ ಫಿಷರ್‌ಮೆನ್ ರಸ್ತೆಯವರೆಗೆ ಕಳೆದೆರಡು ದಿನಗಳಿಂದ ಕಡಲ್ಕೊರೆತ ತೀವ್ರಗೊಂಡಿದ್ದು, ಹತ್ತಿರದಲ್ಲೇ ಇರುವ ಸಂಪರ್ಕ ರಸ್ತೆ ಅಪಾಯದಲ್ಲಿದೆ.
ಭಾರಿ ಗಾತ್ರದ ಕಲ್ಲುಗಳು ಸಮುದ್ರ ಸೇರುತ್ತಿವೆ. ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದು, ಸಮುದ್ರದ ತೆರೆಗಳು ಕಲ್ಲುಗಳಿಗೆ ಬಡಿದು ಮೇಲಕ್ಕೆ ಅಪ್ಪಳಿಸುತ್ತಿವೆ. ರಸ್ತೆ ಸಂಪರ್ಕ ಕಡಿತವಾದರೆ ನೂರಾರು ಮನೆಗಳಿಗೆ ರಸ್ತೆ ಸಂಪರ್ಕ ಕಡಿದುಕೊಳ್ಳಲಿದೆ. ತಕ್ಷಣ ಸೂಕ್ತ ಕ್ರಮಕೈಗೊಳ್ಳುವಂತೆ ವಿವಿಧ ಇಲಾಖೆಗೆ ಸ್ಥಳೀಯಾಡಳಿತದ ಪ್ರತಿನಿಧಿಗಳಾದ ವಿಜಯ ಕುಂದರ್, ಭುಜಂಗ ಗುರಿಕಾರ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.