ADVERTISEMENT

ಜಾತಿಗಣತಿ | ಸಣ್ಣ ಸಮುದಾಯಗಳಿಗೆ ಶಕ್ತಿ ತುಂಬಲಿದೆ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 1 ಮೇ 2025, 13:49 IST
Last Updated 1 ಮೇ 2025, 13:49 IST
<div class="paragraphs"><p>ಕೋಟ ಶ್ರೀನಿವಾಸ ಪೂಜಾರಿ</p></div>

ಕೋಟ ಶ್ರೀನಿವಾಸ ಪೂಜಾರಿ

   

ಉಡುಪಿ: ಕೇಂದ್ರ ಸರ್ಕಾರ ಆದೇಶಿಸಿರುವ ಜನಗಣತಿ, ಜಾತಿಗಣತಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಸಣ್ಣ ಸಮುದಾಯಗಳಿಗೆ ಹೊಸ ಶಕ್ತಿ ತುಂಬಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಇಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ತೀರ್ಮಾನವನ್ನು ಇಡೀ ದೇಶದ ಹಿಂದುಳಿದ ವರ್ಗದವರು, ಎಲ್ಲಾ ಸಮುದಾಯದವರು ಒಟ್ಟಾಗಿ ಸ್ವಾಗತ ಮಾಡುತ್ತಿದ್ದಾರೆ. ಇದರಿಂದ ನಿಖರವಾದ ಅಂಕೆ–ಸಂಖ್ಯೆ ಮತ್ತು ವಿವರ ಕೇಂದ್ರ ಸರ್ಕಾರಕ್ಕೆ ಸಿಗಲಿದೆ ಎಂದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಮಾಡಿರುವುದು ಜಾತಿ ಗಣತಿ ಎಂದು ಎಲ್ಲೂ ಹೇಳಿಲ್ಲ. ಜನಗಣತಿ, ಆರ್ಥಿಕ ಮತ್ತು ಸಾಮಾಜಿಕ ಗಣತಿ ಪ್ರಗತಿ ಆದೇಶ ಅದಾಗಿತ್ತು. ಹತ್ತು ವರ್ಷದಿಂದ ಗಣತಿ ನಡೆದಿದ್ದು ಬಿಟ್ಟರೆ ಅದರ ಪ್ರಕಟಣೆ ಆಗಿಲ್ಲ. ಕುರ್ಚಿಗೆ ಅಪಾಯ ಬಂದಾಗ ಗಣತಿಯ ವಿವರ ನೀಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ನೇರವಾಗಿ ಜಾತಿ ಗಣತಿಗೆ ನಿರ್ದೇಶನ ಕೊಟ್ಟಿದೆ. ತಮ್ಮ ವರದಿಯ ಮಾಹಿತಿಯನ್ನು ಈಗ ಬಹಿರಂಗಪಡಿಸುತ್ತೇವೆ ಮತ್ತೆ ಬಹಿರಂಗಪಡಿಸುತ್ತೇವೆ ಎಂದು ಹೆದರಿಸುವ ಪರಿಪಾಠ ಇನ್ನು ನಡೆಯುವುದಿಲ್ಲಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.