
ಕೋಟ (ಬ್ರಹ್ಮಾವರ): ಮಕ್ಕಳಿಗೆ ಎಳವೆಯಿಂದಲೇ ಪರಿಸರದ ಜೊತೆ ಭಾವನಾತ್ಮಕ ಬೆಸುಗೆಯಾಗಬೇಕು. ಪರಿಸರ ಸಂರಕ್ಷಣೆಯ ಕಾಳಜಿ ಅವರ ಮನದಲ್ಲಿ ಮೂಡಿದಾಗ ಇನ್ನಷ್ಟು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾಗುತ್ತದೆ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು.
ಇಲ್ಲಿನ ಕಾರಂತ ಥೀಂ ಪಾರ್ಕ್‌ನಲ್ಲಿ ಶಿವರಾಮ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಮಣೂರು ಪಡುಕೆರೆ ಗೀತಾನಂದ ಫೌಂಡೇಷನ್, ಉಸಿರು ಸಂಸ್ಥೆ, ಆಶ್ರಯದಲ್ಲಿ ದಿ.ಕೆ.ಸಿಕುಂದರ್ ಸ್ಮರಣಾರ್ಥ ನಡೆಯುತ್ತಿರುವ 24ನೇ ವರ್ಷದ ಬೇಸಿಗೆ ಶಿಬಿರ ‘ವಿಕಸನ’ದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ್ ಆಚಾರ್ಯ ವಕ್ವಾಡಿ, ಸುಮನ ಹೇರ್ಳೆ, ಮಂಜುನಾಥ ಗುಂಡ್ಮಿ, ಪ್ರದೀಪ್ ಬಸ್ರೂರು, ಶಿಬಿರದ ನಿರ್ದೇಶಕ ನರೇಂದ್ರ ಕುಮಾರ್ ಕೋಟ, ಸತೀಶ ವಡ್ಡರ್ಸೆ, ಶಿಬಿರದ ತಂಡಗಳ ನಾಯಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.