ADVERTISEMENT

ಕುಂದಾಪುರ | ರಕ್ತಕ್ಕೆ ಪರ್ಯಾಯವಿಲ್ಲ: ಜಯಕರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 10 ಮೇ 2025, 14:12 IST
Last Updated 10 ಮೇ 2025, 14:12 IST
ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಉದ್ಘಾಟಿಸಲಾಯಿತು
ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಉದ್ಘಾಟಿಸಲಾಯಿತು   

ಕುಂದಾಪುರ: ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತ ತಯಾರಿ ಅಥವಾ ದೇಹದ ಅಂಗಾಂಗ ತಯಾರಿ ಸಾಧ್ಯವಿಲ್ಲ. ರಕ್ತನಿಧಿಗಳಲ್ಲಿ ರಕ್ತದ ಕೊರತೆ ನೀಗಿಸಲು ರಕ್ತದಾನ ಮಾಡಬೇಕು. ವಿದ್ಯಾರ್ಥಿಗಳು ಸಕ್ರಿಯವಾಗಿ ರಕ್ತದಾನದಲ್ಲಿ ಭಾಗವಹಿಸಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಸಭಾಪತಿ ಎಸ್‌. ಜಯಕರ ಶೆಟ್ಟಿ ಹೇಳಿದರು.

ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕಸ್ತೂರಬಾ ಆಸ್ಪತ್ರೆ ಮಣಿಪಾಲ, ಲಯನ್ಸ್ ಕ್ರೌನ್ ಕುಂದಾಪುರ, ರೆಡ್ ರಿಬ್ಬನ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್, ಎನ್‌ಸಿಸಿ ಘಟಕದ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಮಾನವೀಯತೆ ನೆಲೆಯಲ್ಲಿ ರಕ್ತದಾನ ಮಾಡುವುದೇ ಮನುಷ್ಯತ್ವದ ಋಣ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸ್ತೂರಬಾ ಆಸ್ಪತ್ರೆಯ ಸಂಯೋಜಿತ ಆರೋಗ್ಯ ಮತ್ತು ಜೈವಿಕ ವೈದ್ಯಕೀಯ ಕಾರ್ಯಕ್ರಮದ ದೀಪ್ ಮಡ್ಕಂಕರ್ ಅವರು ರಕ್ತದಾನದ ಮಹತ್ವ ವಿವರಿಸಿದರು. ಪ್ರಾಂಶುಪಾಲ ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. 168 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಲಯನ್ಸ್ ಕ್ರೌನ್ ಅಧ್ಯಕ್ಷ ದಿನಕರ ಶೆಟ್ಟಿ, ಸದಸ್ಯ ಕಿರಣ್ ಆಚಾರ್ಯ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಮುತ್ತಯ್ಯ ಶೆಟ್ಟಿ, ಶಿವರಾಮ್‌ ಶೆಟ್ಟಿ, ಸತ್ಯನಾರಾಯಣ ಪುರಾಣಿಕ್, ಎನ್‌ಸಿಸಿ ಅಧಿಕಾರಿ ಶರಣ್ ಎಸ್.ಜೆ ಭಾಗವಹಿಸಿದ್ದರು.

ಎನ್ಎಸ್ಎಸ್ ಅಧಿಕಾರಿ ರಾಮಚಂದ್ರ ಆಚಾರ್ಯ ಸ್ವಾಗತಿಸಿದರು. ಯೂತ್‌ ರೆಡ್‌ಕ್ರಾಸ್ ಸಂಸ್ಥೆಯ ಸಂಯೋಜನಾಧಿಕಾರಿ ವಿದ್ಯಾರಾಣಿ ವಂದಿಸಿದರು. ವಿದ್ಯಾರ್ಥಿನಿ ಭೂಮಿಕಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.